ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆದ ಕೆ.ಎಲ್ ರಾಹುಲ್

ಸಮಗ್ರ ನ್ಯೂಸ್: ಕಳಪೆ ಫಾರ್ಮ್‌ನಿಂದಾಗಿ ವ್ಯಾಪಕ ಟೀಕೆಗೆ ಗುರಿಯಾಗಿರುವ ಕೆಎಲ್ ರಾಹುಲ್, ಸಂಕಷ್ಟದ ಸಮಯದಲ್ಲಿ ದೇವರ ಮೊರೆ ಹೋಗಿದ್ದಾರೆ. ನವೆಂಬರ್ 23ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

Ad Widget ... ..

ಕೆ.ಎಲ್. ರಾಹುಲ್‌ಗೂ ಕುಕ್ಕೆ ಸುಬ್ರಹ್ಮಣ್ಯಕ್ಕೂ ಮೊದಲಿನಿಂದಲೂ ಅವಿನಾಭಾವ ಸಂಬಂಧವಿದೆ. ಈ ಮೊದಲು ಹಲವು ಬಾರಿ ಕೆಎಲ್ ರಾಹುಲ್ ಇಲ್ಲಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಕಳೆದ ಬಾರಿ ಫಾರ್ಮ್ ಕಳೆದು ಕೊಂಡಾಗಲೂ ಇಲ್ಲಿಗೆ ಭೇಟಿ ನೀಡಿದ ನಂತರ ಅವರ ಪ್ರದರ್ಶನ ಉತ್ತಮವಾಗಿತ್ತು.

Ad Widget

ಶೀಘ್ರದಲ್ಲೇ ಕೆಎಲ್ ರಾಹುಲ್ ಮದುವೆಯಾಗುತ್ತಾರೆ ಎನ್ನುವ ವದಂತಿಗಳೂ ಇವೆ. ಆದ್ದರಿಂದ ಯಾವ ಕಾರಣಕ್ಕಾಗಿ ಕೆಎಲ್ ರಾಹುಲ್ ಭೇಟಿ ನೀಡಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ.

Leave a Comment

Your email address will not be published. Required fields are marked *