10 ಸಾವಿರ ಮಂದಿ ಗೂಗಲ್ ನಿಂದ ಹೊರಕ್ಕೆ| ಉದ್ಯೋಗಿಗಳ ವಜಾಕ್ಕೆ ಚಿಂತನೆ

ಸಮಗ್ರ ನ್ಯೂಸ್: ದೈತ್ಯ ಐಟಿ ಕಂಪೆನಿಗಳಲ್ಲಿ ಉದ್ಯೋಗಿಗಳ ವಜಾ ಪರ್ವ ಮುಂ‌ದುವರಿದಿದ್ದು ಇದೀಗ ಗೂಗಲ್‌ ಕಂಪೆನಿಯಿಂದ 10ಸಾವಿರ ಮಂದಿಯನ್ನು ಶೀಘ್ರವೇ ಕೆಲಸದಿಂದ ಕೈಬಿಡಲಾಗುತ್ತಿದೆ ಎಂದು ತಿಳಿದು ಬಂದಿದೆ.

Ad Widget ... ..

ಹೆಡ್ಜ್ ಫಂಡ್ ಬಿಲಿಯನೇರ್ ಕ್ರಿಸ್ಟೋಫರ್ ಹೊಹ್ನ್, ಗೂಗಲ್ ಮಾತೃಸಂಸ್ಥೆಯಾದ ಆಲ್ಫಾಬೆಟ್‌ಗೆ ಈ ಸಂಬಂಧ ಪತ್ರ ಬರೆದಿದ್ದು, ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸಲು ಸಲಹೆ ನೀಡಲಾಗಿದೆ. ಟೆಕ್ ಬೆಹೆಮೊತ್ ಗೂಗಲ್ ಕಾರ್ಯಕ್ಷಮತೆಯ ಸುಧಾರಣೆ ಸಂಬಂಧ ಯೋಜನೆಯೊಂದನ್ನು ಜಾರಿಗೊಳಿಸಲು ಮುಂದಾಗಿದ್ದು, ಇದರ ಫಲಿತಾಂಶವಾಗಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಬೆಕಾಗುತ್ತದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Ad Widget

ಈಗಾಗಲೇ ತನ್ನ ವ್ಯವಸ್ಥಾಪಕರಿಗೆ ಶೇ.6ರಷ್ಟು ಸಿಬಂದಿಯನ್ನು ಕೆಲಸದಿಂದ ತೆಗೆದು ಹಾಕುವಂತೆ ಗೂಗಲ್ ಸೂಚನೆ ನೀಡಿದೆ. ಅಲ್ಲದೆ ಕಡಿಮೆ ಸ್ಕೋರ್ ಹೊಂದಿದ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವಂತೆ ಈ ಹಿಂದೆಯೂ ಮೇಲ್ವಿಚಾರಕರಿಗೆ ಗೂಗಲ್ ನಿರ್ದೇಶಿಸಿತ್ತು ಎನ್ನಲಾಗಿದೆ. ಇನ್ನು ರೇಟಿಂಗ್ ಆಧಾರದ ಮೇಲೆ ನೀಡುವ ಬೋನಸ್,ಇತರ ಸವಲತ್ತುಗಳನ್ನೂ ಕಡಿತಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದೂ ಹೇಳಲಾಗುತ್ತಿದೆ.

Leave a Comment

Your email address will not be published. Required fields are marked *