ಆತನ ಅನೈತಿಕ ಸಂಬಂಧದಿಂದ ನೊಂದ ಪತ್ನಿ ಆತ್ಮಹತ್ಯೆ| ವರ್ಷದೊಳಗೆ ಸಂಸಾರಕ್ಕೆ ಕೊಳ್ಳಿ!!

ಸಮಗ್ರ ನ್ಯೂಸ್: ಆತನಿಗೆ ಮನೆಯೂಟ ರುಚಿಸ್ತಾ ಇರ್ಲಿಲ್ಲ. ಇದಕ್ಕಾಗಿ ಆತ ಹೊರಗಿನ ದಾರಿ ಹಿಡಿದ. ಇದರಿಂದ ನೊಂದ ಆತನ ಪತ್ನಿ ಆತ್ಮಹತ್ಯೆ ಮಾಡಿಕೊಂಡಳು. ಐಬಿಎಂ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರೂ‌ ಪತಿಯ ಅನೈತಿಕ ಸಂಬಂಧ ಆಕೆಯ ಬದುಕಿಗೆ ಕೊಳ್ಳಿ ಇಟ್ಟಿದೆ. ಬೆಂಗಳೂರಿನ ರಾಮಮೂರ್ತಿ ನಗರದ ರಿಚರ್ಡ್ ಗಾರ್ಡನ್ ನಲ್ಲಿ ನ.10ರಂದು ಈ ಘಟನೆ ನಡೆದಿದ್ದು, ಅದರ ಹಿನ್ನೆಲೆ ನಿಧಾನಕ್ಕೆ ಬಿಚ್ಚಿಕೊಳ್ಳುತ್ತಿದೆ.

Ad Widget ... ..

ಐಬಿಎಂನಲ್ಲಿ ಉದ್ಯೋಗಿಯಾಗಿರುವ ಶ್ವೇತಾ (27) ನೇಣಿಗೆ ಶರಣಾದ ದುರ್ದೈವಿ. ಪತಿ ಅಭಿಷೇಕ್‌ ಅವರು ಹೊಂದಿರುವ ಅಕ್ರಮ ಸಂಬಂಧದಿಂದ ಬೇಸತ್ತು ಆಕೆ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಅಭಿಷೇಕ್ ವಿರುದ್ಧ ಮೃತಳ ಕುಟುಂಬಸ್ಥರು ಆರೋಪಿಸಿದ್ದರು.

Ad Widget

ಅಭಿಷೇಕ್‌ ಮತ್ತು ಶ್ವೇತಾ ಅವರ ವಿವಾಹ 11 ತಿಂಗಳ ಹಿಂದಷ್ಟೇ ಅದ್ದೂರಿಯಾಗಿ ನಡೆದಿತ್ತು. ಅಭಿಷೇಕ್ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಶ್ವೇತಾ ಐಬಿಎಂ ಕಂಪನಿ ಉದ್ಯೋಗಿಯಾಗಿದ್ದರು.

ಅಭಿಷೇಕ್‌ ಮದುವೆಗೆ ಮುನ್ನ ಯುವತಿಯೊಬ್ಬಳೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಮದುವೆಯ ನಂತರ ಈ ವಿಚಾರ ಗೊತ್ತಾಗಿ ದಂಪತಿ ನಡುವೆ ಜಗಳವಾಗಿತ್ತು. ಬಳಿಕ ಪರಸ್ಪರ ರಾಜಿ ಪಂಚಾಯಿತಿ ಬಳಿಕ ಒಟ್ಟಿಗೆ ಜೀವನ ಸಾಗಿಸುತ್ತಿದ್ದರು. ಈ‌ ನಡುವೆ ಅಭಿಷೇಕ್‌ ಪುನಃ ತನ್ನ ಹಳೇ ಚಾಳಿ‌ ಮುಂದುವರೆಸಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಶ್ವೇತಾ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಅಭಿಷೇಕ್‌ನನ್ನು ಬಂಧಿಸಲಾಗಿದೆ.

Leave a Comment

Your email address will not be published. Required fields are marked *