ಸಮಗ್ರ ನ್ಯೂಸ್: ನಾವೆಲ್ಲಾ ಎಲೆಕ್ಟ್ರಿಕ್ ವಾಹನಗಳನ್ನು ನಮ್ಮ ಮನೆಯಲ್ಲೇ ಪ್ಲಗ್ ಇನ್ ಮಾಡಿ ಚಾರ್ಜ್ ಮಾಡಿದ್ರೆ ಇಲ್ಲೊಬ್ಬ ಬ್ಯಾಂಕ್ ಅಧಿಕಾರಿ ಬ್ಯಾಂಕ್ ನ ಎಟಿಎಂ ಸೆಂಟರ್ ಅನ್ನೇ ತನ್ನ ಸ್ಕೂಟರ್ ನ ಚಾರ್ಜಿಂಗ್ ಪಾಯಿಂಟ್ ಮಾಡ್ಕೊಂಡಿದಾನೆ. ತಿಂಗಳಲ್ಲಿ ಬರೋಬ್ಬರಿ ಸಂಬಳ ಎಣಿಸಿದ್ರೂ ಈ ಅಧಿಕಾರಿಗೆ ಎಲ್ಲವೂ ಪುಕ್ಸಟ್ಟೆನೇ ಆಗ್ಬೇಕು. ಯಾರು ಈ ಮಹಾನುಭಾವ ಅಂತ ಕೇಳಿದ್ರಾ? ಮುಂದೆ ಓದಿ…
ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡು ಎಂಬ ಗ್ರಾಮದಲ್ಲಿ ಒಂದು ಎಸ್ ಬಿಐ ಬ್ಯಾಂಕ್ ಶಾಖೆಯಿದೆ. ಇದರ ಪಕ್ಕದಲ್ಲೇ ಈ ಬ್ಯಾಂಕ್ ನ ಒಂದು ಎಟಿಎಂ ಸೆಂಟರ್ ಕೂಡಾ ಇದೆ. ವಿಷ್ಯ ಏನಂದ್ರೆ ಈ ಬ್ಯಾಂಕ್ ನ ಕ್ಯಾಷಿಯರ್ ಆಗಿರುವ ಜಯರಾಮ ಎಂಬಾತ ಒಂದು ಎಲೆಕ್ಟ್ರಿಕ್ ಸ್ಕೂಟರ್ ಹೊಂದಿದ್ದು, ಅದನ್ನು ದಿನಂಪ್ರತಿ ಚಾರ್ಜ್ ಮಾಡಲು ಎಟಿಎಂ ನಲ್ಲಿರುವ ಪ್ಲಗ್ ಪಾಯಿಂಟ್ ಅನ್ನೇ ಚಾರ್ಜಿಂಗ್ ಪಾಯಿಂಟ್ ಆಗಿ ಬಳಕೆ ಮಾಡ್ತಿದಾನೆ.
ದಿನಂಪ್ರತಿ ಈ ಅಧಿಕಾರಿಯದ್ದು ಇದೇ ಕತೆ. ಮನೆಯಲ್ಲಿ ಪವರ್ ಇಲ್ವೋ ಅಥವಾ ಪುಕ್ಸಟ್ಟೆ ಲಾಭ ಪಡೆದುಕೊಳ್ಳೋ ಉದ್ದೇಶವೋ ಗೊತ್ತಿಲ್ಲ. ಆದರೂ ಇದರಿಂದ ಬ್ಯಾಂಕ್ ಗೆ ನಷ್ಟ ಉಂಟಾಗ್ತಿರೋದಂತೂ ಸತ್ಯ.
ಮತ್ತೆ ಇಲ್ಲಿನ ಎಟಿಎಂ ಕೂಡಾ ಕೇವಲ ಹಗಲಿನ ಅವಧಿಯಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತದೆ. ಅದೂ ಬ್ಯಾಂಕ್ ಅವಧಿಯಲ್ಲಿ ಮಾತ್ರ. ಇದರಿಂದ ಗ್ರಾಹಕರಿಗೂ ಕಿರಿಕಿರಿ.
ಪ್ರತಿ ತಿಂಗಳು ಉತ್ತಮ ಸಂಬಳವನ್ನೇ ಎಣಿಕೆ ಮಾಡುವ ಈ ಬ್ಯಾಂಕ್ ಅಧಿಕಾರಿಗೆ ಅದೇಕೆ ಚಿಲ್ಲರೆ ಉಳಿಸುವ ಆಲೋಚನೆ ಬಂತೋ ಗೊತ್ತಿಲ್ಲ. ಜೊತೆಗೆ ಈತನದ್ದು ಬ್ಯಾಂಕ್ ನ ಒಳಗೂ ಗ್ರಾಹಕರ ಜೊತೆ ಸರಿಯಾಗಿ ನಡೆದುಕೊಳ್ಳುವ ಜಾಯಮಾನ ಇಲ್ವಂತೆ. ಹಾಗಂತ ಹಲವು ಗ್ರಾಹಕರು ಈತನ ಬಗ್ಗೆ ಹೊರಗಡೆ ಅಲವತ್ತುಕೊಂಡದ್ದೂ ಇದೆ. ಒಟ್ಟಾರೆ ಇಂತಹ ಚಿಲ್ಲರೆ ಮನಸ್ಥಿತಿಗಳು ಯಾವಾಗ ಸರಿಯಾಗುತ್ತೋ ದೇವರೇ ಬಲ್ಲ.