ಸಮಗ್ರ ನ್ಯೂಸ್: ಶಾಸಕರನ್ನು ಅಪಹರಿಸಿ ಅವರನ್ನು ಕೋಟಿ ಕೋಟಿ ಹಣಕ್ಕೆ ಖರೀದಿ ಮಾಡಲು ಪ್ರಯತ್ನಿಸಿದ್ದರು ಎಂಬ ಆರೋಪದಡಿ ತನಿಖೆ ನಡೆಸುತ್ತಿರುವ ತೆಲಂಗಾಣ ವಿಶೇಷ ತನಿಖಾ ತಂಡ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ ಮತ್ತಿಬ್ಬರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿದೆ.
ತೆಲಂಗಾಣದ ಆಡಳಿತಾರೂಢ ಟಿಆರ್‌ಎಸ್ ಶಾಸಕರನ್ನು ಅಪಹರಿಸಿ ಅವರನ್ನು ಕೋಟಿ ಕೋಟಿ ಹಣಕ್ಕೆ ಖರೀದಿ ಮಾಡಲು ಪ್ರಯತ್ನಿಸಿದ್ದರು ಎಂಬ ಆರೋಪದ ತನಿಖೆ ನಡೆಸುತ್ತಿರುವ ತೆಲಂಗಾಣ ವಿಶೇಷ ತನಿಖಾ ತಂಡ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ತುಷಾರ್ ವೆಲ್ಲಪಲ್ಲಿ ಮತ್ತು ಜಗ್ಗು ಸ್ವಾಮಿ ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ.
ಬಿ.ಎಲ್. ಸಂತೋಷ್, ತುಷಾರ್ ವೆಲ್ಲಪಲ್ಲಿ ಮತ್ತು ಜಗ್ಗು ಸ್ವಾಮಿ ಅವರಿಗೆ ತೆಲಂಗಾಣ ಶಾಸಕರ ಖರೀದಿ ಆರೋಪದ ಹಿನ್ನೆಲೆಯಲ್ಲಿ ವಿಚಾರಣೆ ಹಾಜರಾಗುವಂತೆ ಎಸ್‌ಐಟಿ ಸಮನ್ಸ್ ನೀಡಿತ್ತು. ಆದರೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಎಸ್‌ಐಟಿ ಲುಕ್‌ಔಟ್ ನೋಟಿಸ್ ನೀಡಿದೆ.
ಇನ್ನು ಕೇರಳ ಮೂಲದ ವೈದ್ಯ ಜಗ್ಗು ಸ್ವಾಮಿ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ಟಿಆರ್ ಎಸ್ ನ ನಾಲ್ವರು ಶಾಸಕರನ್ನು ಬಿಜೆಪಿಗೆ ಪಕ್ಷಾಂತರ ಮಾಡಲು ಆಮಿಷವೊಡ್ಡುವ ಪಿತೂರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಲುಕ್‌ಔಟ್ ನೋಟಿಸ್‌ನಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.