Ad Widget .

ಮಂಗಳೂರು ಸ್ಪೋಟ ಪ್ರಕರಣ| ಶಾರೀಕ್ ಗೆ ಪಂಪ್ವೆಲ್ ಪ್ಲೈ ಜಂಕ್ಷನ್ ಟಾರ್ಗೆಟ್ ಆಗಿತ್ತು!!

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟ್ ಪ್ರಕರಣದಲ್ಲಿ ಒಂದೊಂದೇ ಆಘಾತಕಾರಿ‌ ಅಂಶಗಳು ಬೆಳಕಿಗೆ ಬರುತ್ತಿವೆ. ಈಗಾಗಲೇ ಸೆರೆ ಸಿಕ್ಕ ಶಾರೀಕ್ ಪಂಪ್‌ವೆಲ್‌ ಫ್ಲೈ ಓವರ್‌ಬಳಿ ಕುಕ್ಕರ್‌ ಬಾಂಬ್‌ ಇಡಲು ಪ್ಲ್ಯಾನ್‌ ಮಾಡಿದ್ದ ವಿಚಾರ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

Ad Widget . Ad Widget .

ಪಂಪ್ ವೆಲ್ ಜಂಕ್ಷನ್ ಕೇರಳಕ್ಕೆ ಹೋಗುವ ವಾಹನಗಳ ಜೊತೆ ಹಾಸನ, ಕೊಡಗು, ಚಿಕ್ಕಮಗಳೂರು ಕಡೆಗೆ ಹೋಗುವ ವಾಹನಗಳ ಜನನಿಬಿಡ ಪ್ರದೇಶ. ನಗರಕ್ಕೆ ವಾಹನಗಳ ಪ್ರವೇಶ ಮತ್ತು ನಿರ್ಗಮನ ಈ ರಸ್ತೆಯ ಮೂಲಕವೇ ಆಗುತ್ತದೆ.

Ad Widget . Ad Widget .

ಮಂಗಳೂರಿಗೆ ಹಲವು ಬಾರಿ ಬಂದಿದ್ದ ಶಾರೀಕ್‌ ನಗರದಲ್ಲಿ ಎಲ್ಲಿ ಹೆಚ್ಚು ಜನರು ಸಂಚರಿಸುತ್ತಾರೆ ಎಂಬುದನ್ನು ತಿಳಿದಿದ್ದ. ಇಲ್ಲಿ ಯಾವುದೇ ಬಸ್‌ ಸ್ಟ್ಯಾಂಡ್‌ ಇಲ್ಲ. ಸಂಜೆಯ ವೇಳೆಗೆ ಜನ ಇಲ್ಲಿ ಬಸ್‌ ಹತ್ತಲು ನಿಂತಿರುತ್ತಾರೆ. ಅದರಲ್ಲೂ ಕೋಣಾಜೆ-ತೊಕ್ಕೊಟ್ಟು-ಉಳ್ಳಾಲ ಭಾಗಕ್ಕೆ ತೆರಳುವ ಜನರು ಅತಿ ಹೆಚ್ಚು ಸಂಖ್ಯೆಯಲ್ಲಿ ಇಲ್ಲಿ ಇರುತ್ತಾರೆ. ಈ ಕಾರಣಕ್ಕೆ ಶಾರೀಕ್‌ ಪಂಪ್‌ವೆಲ್‌ ಬಳಿಯೇ ಕುಕ್ಕರ್‌ ಬಾಂಬ್‌ ಇಡಲು ಪ್ಲ್ಯಾನ್‌ ಮಾಡಿದ್ದ.

ಶನಿವಾರ ಸಂಜೆ 5 ಗಂಟೆಯ ವೇಳೆ ಮಂಗಳೂರಿನ ನಾಗುರಿ ಕಡೆ ಚಲಿಸುತ್ತಿದ್ದ ಆಟೋ ನಿಗೂಢ ಸ್ಫೋಟಗೊಂಡಿತ್ತು. ದಾರಿ ಮಧ್ಯೆ ಕುಕ್ಕರ್ ಹಿಡಿದುಕೊಂಡು ಆಟೋ ಹತ್ತಿದ್ದ ಶಾರೀಕ್‌ ನಾಗುರಿಗೆ ಹೋಗಲು ಚಾಲಕನಿಗೆ ಸೂಚಿಸಿದ್ದ. ಆದರೆ ಕೆಲವೇ ಕ್ಷಣದಲ್ಲಿ ಮಂಗಳೂರಿನ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆಯ ಎದುರು ಆಟೋದ ಒಳಗೆ ಸ್ಫೋಟಗೊಂಡಿದ್ದು ಶಾರೀಕ್‌ ಕೈಯಲ್ಲಿದ್ದ ಕುಕ್ಕರ್ ಛಿದ್ರಗೊಂಡಿತ್ತು.

Leave a Comment

Your email address will not be published. Required fields are marked *