Ad Widget .

ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್| ನಾನು ಪ್ರಿಯತಮನ ಜೊತೆ ಬಂದಿದ್ದೇನೆ ಎಂದ ವಿಡಿಯೋ ವೈರಲ್

ಸಮಗ್ರ ನ್ಯೂಸ್: ಕಳೆದೆರಡು ವಾರದಿಂದ ಕಾಣೆಯಾಗಿದ್ದ ಸುಬ್ರಹ್ಮಣ್ಯ ಗ್ರಾ.ಪಂ.ಸದಸ್ಯೆ ಭಾರತಿ ಮೂಕಮಲೆ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆಕೆಯ ವಿಡಿಯೊ ಒಂದು ವೈರಲ್ ಆಗುತ್ತಿದೆ. ಭಾರೀ ಕುತೂಹಲ ಹುಟ್ಟಿಸಿದ್ದ ಭಾರತಿ ಮೂಕಮಲೆ ಅವರ ನಾಪತ್ತೆ ಪ್ರಕರಣದ ತನಿಖೆಗೆ ವಿವಿಧ ಸಂಘಟನೆಗಳು, ಕುಟುಂಬಸ್ಥರು ಆಗ್ರಹಿಸಿದ್ದರು. ಆದರೆ ಈಗ ಆಕೆಯ ವಿಡಿಯೋ ಒಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Ad Widget . Ad Widget .

ಅ. 29ರಂದು ಐನೆಕಿದು ಗ್ರಾಮದ ಮೂಕಮಲೆ ಮನೆ ನಿವಾಸಿ ಶಶಿಕಾಂತ್‌ ಎಂಬವರ ಪತ್ನಿ ಭಾರತಿ ಮೂಕಮಲೆ ನಾಪತ್ತೆಯಾಗಿದ್ದು, ಈ ಬಗ್ಗೆ ದೂರು ದಾಖಲಾಗಿದೆ. ಇದೀಗ ಭಾರತಿ ಅವರ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ” ನಾನು ನಾನಾಗಿಯೇ ಬಂದಿದ್ದೇನೆ. ನನ್ನನ್ನು ಯಾರೂ ಅಪಹರಿಸಿಲ್ಲ. ನಾನು ಅವರನ್ನು ಮನೆಯ ಹತ್ತಿರ ಬರಲು ಹೇಳಿದ್ದೆ. ಅವರು ಬಂದು ನನ್ನನ್ನು ಕರೆದುಕೊಂಡು ಹೋದರು. 5 ವರ್ಷದಿಂದ ನಾನು ಲವ್ ಮಾಡ್ತಾ ಇದ್ದೆ. ಈಗಲೂ ಮಾಡ್ತಾ ಇದ್ದೇನೆ. ಮದುವೆಗೆ ಮುಂಚೆನೂ ಲವ್ ಮಾಡ್ತಿದ್ದೆ. ಇದರಿಂದಾಗಿ ಯಾರಿಗೂ ತೊಂದರೆ ಕೊಡಬೇಡಿ. ಯಾರತ್ರ ಕೇಳುವುದೂ ಬೇಡ’.

Ad Widget . Ad Widget .

‘ನಮಗೆ ತೊಂದರೆ ಕೊಡಬೇಡಿ. ಹಾಗೇನಾದ್ರೂ ಮಾಡಿದ್ರೆ ನಾವಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ. ನಾನು ಖುಷಿಯಾಗಿಯೇ ಇದ್ದೇನೆ. ಆಮೇಲೆ ಏನಾದ್ರೂ ಆದರೆ ನೀವೇ ಜವಾಬ್ದಾರರು ಎಂದು ಅವರು ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಒಟ್ಟಾರೆ ಈ ಪಂಚಾಯತ್ ಸದಸ್ಯೆಯ ಅವಾಂತರದಿಂದಾಗಿ ಪೊಲೀಸರಿಗೆ ತಲೆನೋವಾಗಿದೆ.

Leave a Comment

Your email address will not be published. Required fields are marked *