Ad Widget .

ಫಿಫಾ ವಿಶ್ವಕಪ್: ಅರ್ಜೆಂಟೀನಾ ‌ಮಣಿಸಿದ ಸೌದಿ| ಸಂಭ್ರಮಾಚರಣೆಗೆ ರಜೆ ಘೋಷಿಸಿದ ದೊರೆ ಸಲ್ಮಾನ್

ಸಮಗ್ರ ನ್ಯೂಸ್: ಫಿಫಾ ವಿಶ್ವಕಪ್‌ ಫುಟ್ಬಾಲ್‌ ನ ಮಂಗಳವಾರ ನಡೆದ ಪಂದ್ಯಾಟದಲ್ಲಿ ಅನಿರೀಕ್ಷಿತ ಮತ್ತು ಐತಿಹಾಸಿಕವೆಂಬಂತೆ ಬಲಿಷ್ಠ ಅರ್ಜೆಂಟೀನಾದ ವಿರುದ್ಧ ಸೌದಿ ಅರೇಬಿಯಾ ಜಯ ಸಾಧಿಸಿದೆ. 2-1 ಅಂತರದಲ್ಲಿ ಸೌದಿ ಅರೇಬಿಯಾ ಖ್ಯಾತ ಆಟಗಾರ ಲಿಯೋನಲ್‌ ಮೆಸ್ಸಿಯ ಅರ್ಜೆಂಟೀನ ತಂಡಕ್ಕೆ ಸೋಲುಣಿಸಿದೆ.

Ad Widget . Ad Widget .

ವಿಶೇಷವೆಂದರೆ ವಿಶ್ವಕಪ್ ಗೆದ್ದ ಸಂಭ್ರಮಾಚರಣೆ ಸಲುವಾಗಿ ನಾಳೆ ಸೌದಿ ದೊರೆ ಸಲ್ಮಾನ್‌ ದೇಶಾದ್ಯಂತ ರಜೆ ಘೋಷಿಸಿದ್ದಾರೆ.

Ad Widget . Ad Widget .

“2022ರ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾ ತಂಡದ ಅದ್ಭುತ ವಿಜಯದ ಸಂಭ್ರಮದಲ್ಲಿ, ನಾಳೆ, ಬುಧವಾರ, ಸಾರ್ವಜನಿಕ ಮತ್ತು ಖಾಸಗಿ ವಲಯದ ಎಲ್ಲಾ ಉದ್ಯೋಗಿಗಳಿಗೆ ಮತ್ತು ಶಿಕ್ಷಣದ ಎಲ್ಲಾ ಹಂತಗಳ ವಿದ್ಯಾರ್ಥಿಗಳಿಗೆ ರಜಾದಿನವಾಗಿದೆ ಎಂದು ರಾಜ ಸಲ್ಮಾನ್ ಆದೇಶಿಸಿದ್ದಾರೆ” ಎಂದು ಸೌದಿ ಗಝೆಟ್ ವರದಿ ಮಾಡಿದೆ.

ಅಪಾರ ಪ್ರಮಾಣದ ಫುಟ್ಬಾಲ್ ಅಭಿಮಾನಿಗಳನ್ನ ಹೊಂದಿರುವ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು 1-2 ಗೋಲುಗಳ ಅಂತರದಲ್ಲಿ ಸೋಲುವ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಅಚ್ಚರಿಯ ಫಲಿತಾಂಶ ಕಂಡಂತಹ ಪಂದ್ಯಗಳ ಪಟ್ಟಿಗೆ ಸೇರ್ಪಡೆಗೊಂಡಿದೆ.

Leave a Comment

Your email address will not be published. Required fields are marked *