Ad Widget .

ದೀಪಿಕಾ ದಾಸ್ ರೀ ಎಂಟ್ರಿ| ದೊಡ್ಮನೆಗೆ ಇನ್ಯಾರೆಲ್ಲಾ ಬರ್ತಾರೋ? ಕಹಾನಿ ಮೇ ಟ್ವಿಸ್ಟ್…

ಸಮಗ್ರ ನ್ಯೂಸ್: ಬಿಗ್ ಬಾಸ್ ಮನೆ ಇದೀಗ 60 ದಿನಗಳನ್ನ ಪೂರೈಸಿ, ಮುನ್ನುಗ್ಗುತ್ತಿದೆ. ಸಾಕಷ್ಟು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ದೊಡ್ಮನೆಯ ಏಳನೇ ಸ್ಪರ್ಧಿಯಾಗಿ ದೀಪಿಕಾ ದಾಸ್ ಔಟ್ ಆಗಿದ್ದರು. ಆದರೆ ಕಹಾನಿ ಮೇ ಟ್ವಿಸ್ಟ್ ಎಂಬಂತೆ ಮತ್ತೆ ದೀಪಿಕಾ ದಾಸ್ ಅವರ ರೀ ಎಂಟ್ರಿಯಾಗಿದೆ.

Ad Widget . Ad Widget .

ದೊಡ್ಮನೆಯ ಆಟದಲ್ಲಿ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಿಗ್ ಮನೆಯಲ್ಲಿ ಪ್ರತಿ ಸೀಸನ್‌ನಲ್ಲೂ ಅರ್ಧ ಆಟ ಆಗುತ್ತಿದ್ದಂತೆ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಯನ್ನ ಕಳುಹಿಸಲಾಗುತ್ತದೆ. ಹಾಗಾಗಿ ಸಾನ್ಯ ಅಯ್ಯರ್, ಸೋನು, ಚಕ್ರವರ್ತಿ ಚಂದ್ರಚೂಡ್ ವೈಲ್ಡ್ ಕಾರ್ಡ್ ಎಂಟ್ರಿ ಬರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ದೀಪಿಕಾ ದಾಸ್ ಅವರೇ ರೀ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

Ad Widget . Ad Widget .

ಇದೀಗ ವಾಹಿನಿಯಲ್ಲಿ ಕಾಡಿನ ಟಾಸ್ಕ್ ಕುರಿತು ಒಂದು ಪ್ರೋಮೋ ಬಿಡಲಾಗಿದೆ. ಈ ಪ್ರೋಮೋದಲ್ಲಿ ರೀ ಎಂಟ್ರಿಯ ಬಗ್ಗೆ ಸೂಚನೆ ಕೊಡಲಾಗಿದೆ. ಅದು ದೀಪಿಕಾ ದಾಸ್ ಅವರೇ ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ. ಎಲಿಮಿನೇಟ್ ಆದ ಮೇಲೆ ದೀಪಿಕಾ ದಾಸ್ ಅವರ ಮನೆಗೆ ಬಂದಿಲ್ಲ. ಮಾಧ್ಯಮದ ಕಣ್ಣಿಗೂ ಬಿದ್ದಿಲ್ಲ. ಹಾಗಾಗಿ ದೀಪಿಕಾ ಅವರೇ ರೀ ಎಂಟ್ರಿ ಕೊಟ್ಟಿರಬಹುದು ಎಂದು ಹೇಳಲಾಗುತ್ತಿದೆ. ಎಲ್ಲದಕ್ಕೂ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

Leave a Comment

Your email address will not be published. Required fields are marked *