Ad Widget .

ತುಳುನಾಡಿನ ಸಹಕಾರಿ ಕ್ರಾಂತಿ
ಕಲ್ಯಾಣ ಕರ್ನಾಟಕದಲ್ಲಿ ಏಕಿಲ್ಲ?

ಮಂಗಳೂರು ಜಿಲ್ಲೆ ಎಂದಾಕ್ಷಣ ಸಾಕಷ್ಟು ವಿಚಾರ ಚಿಂತನೆ ಆಲೋಚನೆ, ಥಟ್ ಅಂತ ಮೆದುಳಿಗೆ ಹೊಳೆಯುತ್ತದೆ. ಸಂಸ್ಕೃತಿ, ಆಚರಣೆ, ವ್ಯಾಪಾರ, ವ್ಯವಹಾರ, ಕೃಷಿ, ಕೈಗಾರಿಕೆ, ಶಿಕ್ಷಣ, ವಾಣಿಜ್ಯ, ಧರ್ಮ, ಕಲೆ, ಸಾಹಿತ್ಯ ಸಂಗೀತ, ಪ್ರಾಕೃತಿಕ ಸೊಗಡು, ಕಡಲತೀರ.. ಹೀಗೆ ಹತ್ತು ಹಲವು ವೈವಿಧ್ಯತೆಗೆ ಹೆಸರುವಾಸಿ ಈ ತುಳುನಾಡು.

Ad Widget . Ad Widget .

ಜನಸಂಖ್ಯೆ ತೀರಾ ವಿರಳವಾದರೂ ಎಲ್ಲ ಕ್ಷೇತ್ರಗಳಿಂದಲೂ ಮುಂದುವರೆದ ಪ್ರದೇಶವಿದು. ಜನರ ಆಲೋಚನೆ ಜೀವನ ಕ್ರಮವೇ ವಿಶಿಷ್ಠವಾಗಿದೆ. ಇಲ್ಲಿಯ ಜನರು ‘ನಮ್ಮದು ಮುಂದುವರೆದ ಸಂಸ್ಕೃತಿ’ ಎಂದು ಹೆಮ್ಮೆಯಿಂದ ಬಿಗುತ್ತಾರೆ. “ನಾವು ತುಳುನಾಡಿನ ಜನರು” ಎಂದು ಎಲ್ಲಡೆಯೂ ಹೆಮ್ಮೆಯಿಂದ ಸಾರುತ್ತಾರೆ.

Ad Widget . Ad Widget .

ಇಷ್ಟು ದೊಡ್ಡ ಮಟ್ಟದ ಪ್ರಗತಿಗೆ ಸಾಕಷ್ಟು ವರ್ಷಗಳೇ ಉರುಳಿವೆ. ಸಾಕಷ್ಟು ಜನರ ಪರಿಶ್ರಮವಿದೆ. ಪ್ರಕೃತಿಯ ವರದಾನವಿದೆ. ಬಹುಮುಖ್ಯವಾಗಿ ಜನರಲ್ಲಿ ಇರುವ ನಂಬಿಕೆ, ವಿಶ್ವಾಸ, ಬದ್ದತೆ, ಶಿಸ್ತು, ಶ್ರಮ ಪರಸ್ಪರ ಅಭಿವೃದ್ದಿಗೆ ಸಹಕಾರಕ್ಕೆ ಪಾರಂಪರಿಕ ಜೀವನ ಶೈಲಿಯೇ ಕಾರಣವಾಗಿದೆ. ಈ ಅಭಿವೃದ್ದಿಯ ಹಿಂದೆ ಸಾಕಷ್ಟು ತಲೆಮಾರುಗಳ ಪರಿಶ್ರಮವಿದೆ. ತ್ಯಾಗವಿದೆ. ಆಡಳಿತ ವ್ಯವಸ್ಥೆಯ ಸಹಕಾರ ಬೆಂಬಲವಿದೆ. ಎಷ್ಟೇ ಸಿರಿವಂತರಾದರೂ ಮೈ ಮುರಿದು ದುಡಿಯುತ್ತಾರೆ. ದುರ್ಬಲರಿಗೆ ದುಡಿಯಲು ಸಾಕಷ್ಟು ಅವಕಾಶಗಳು ಇವೆ. ಅಥವಾ ಅವಕಾಶ ಅರಸಿಕೊಂಡು ಹೋಗುತ್ತಾರೆ. ಬಡವರಾಗಿದ್ದರೂ ವಿವಿಧ ಕೆಲಸ ಕಾರ್ಯಗಳಿಗಾಗಿ ‘ಗುಳೆ’ ಹೋದರೂ, ಹಣ ಮಾಡುವ ಸೇವಾ ಕ್ಷೇತ್ರಗಳನ್ನೇ ಪ್ರಮುಖವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಅಪ್ಪಿ ತಪ್ಪಿಯೂ ಯಾವತ್ತು ಇವರು ದೈಹಿಕ ಶ್ರಮ ಬೇಡುವ ರಸ್ತೆ ಕೆಲಸ, ಮನೆ ಕಟ್ಟಡ ಕಾಮಗಾರಿಯಂತ ಕೆಲಸ ಆಯ್ಕೆ ಮಾಡುವುದಿಲ್ಲ.

ಕಲ್ಯಾಣ ಅಥವಾ ಮುಂಬೈ (ಕೆಲವು ಜಿಲ್ಲೆ) ಕರ್ನಾಟಕಕ್ಕೆ ಇಂದಿನ ಸರ್ಕಾರಗಳು ವರ್ಷಕ್ಕೆ ಕೋಟಿ ಕೋಟಿ ಹಣ ವ್ಯಯ ಮಾಡುತ್ತದೆ. ಆದರೆ, ಜನರ ಅಭಿವೃದ್ದಿ ಸೂಚಿ ಮಾತ್ರ ನಿಧಾನಗತಿಯಾಗಿಯೆ ಇದೆ. ಇದಕ್ಕೆ ಯಾರು ಹೊಣೆ ಕಾರಣ ?

ಒಂದು ಸೀಮಿತ ವ್ಯಾಪ್ತಿಯ ಮಂಗಳೂರು ಜಿಲ್ಲೆ ಸಾಕಷ್ಟು ಅಭಿವೃದ್ದಿ ಸಾಧಿಸಿ ಬಹುಪಾಲು ಆರ್ಥಿಕವಾಗಿ ಸಶಕ್ತವಾಗಿದೆ. ಆದರೆ, ಅದೇ ಹೈದ್ರಾಬಾದ್ ಮುಂಬೈ ಕರ್ನಾಟಕದ ಕೆಲವು ತಾಲ್ಲೂಕು ಏಕೆ ಈವರೆಗೂ ತೀರಾ ಹಿಂದುಳಿಯಿತು. ಜನರ ಮನೋಧೊರಣೆಯೋ? ಪ್ರಾಕೃತಿಕ ಶಾಪವೋ? ರಾಜಕಾರಣಿಗಳ ಇಚ್ಚಾ ಶಕ್ತಿ ಕೊರತೆಯೊ? ಮೆಲ್ ಸ್ತರದ ಜನರ ವ್ಯವಸ್ಥಿತ ಶೋಷಣೆಯೊ? ಜನರ ಅಜ್ಞಾನವೋ ? ಯಾರು ಕಾರಣರು? ಹೇಗೆ ಕಾರಣರು?

ಒಂದು ಪ್ರದೇಶ ಬದಲಾಗುತ್ತದೆ ಎಂದರೆ, ಅದಕ್ಕೆ ಮುಖ್ಯ ಕಾರಣ, ಅಲ್ಲಿಯ ಆಚರಣೆ ಚಿಂತನೆಗಳು, ಲೋಕ ರೂಢಿಗಳು, ನಿಯಮಗಳು ಬದಲಾವಣೆ ಬಯಸುವ ಮನಸ್ಸುಗಳು, ಹೊಸತನಕ್ಕೆ ತೆರೆದುಕೊಳ್ಳುವ ಸ್ವೀಕರಿಸುವ ಗುಣ ಸ್ವಭಾವ ಹೀಗೆ ಎಲ್ಲವೂ ಕಾರಣವಾಗುತ್ತದೆ. ಒಂದು ಸಾಮಾಜಿಕ ವ್ಯವಸ್ಥೆ ಬದಲಾಗಲು ಜನರು ಎಷ್ಟು ಕಾರಣರೋ ಅಲ್ಲಿಯ ಆಡಳಿತ ವ್ಯವಸ್ಥೆಯ ಜನ ನಾಯಕರು ಅಷ್ಟೇ ಪ್ರಧಾನ ಪಾತ್ರ ವಹಿಸುತ್ತಾರೆ. ದುರ್ಬಲ ಜನರನ್ನು ಸಬಲರನ್ನಾಗಿ ಮಾಡುವ ಶಕ್ತಿ ಸಾಮರ್ಥ್ಯ ಆಡಳಿತಕ್ಕೆ ಇರುತ್ತದೆ. ಜೊತೆಗೆ ಜನರೂ ಕೂಡಾ ಸ್ಪಂದಿಸಬೇಕಾಗುತ್ತದೆ. ಇದೊಂದ್ ರೀತಿ ವೈಸ್ ವರ್ಸಾ.

ನಾನು ಇತ್ತೀಚೆಗೆ ಕನ್ನಡ ದಿನ ಪತ್ರಿಕೆಯೊಂದರ ಮಂಗಳೂರು ಎಡಿಷನ್ ಕಾಪಿಯ ಮೇಲೆ ಹಾಗೆ ಕಣ್ಣಾಡಿಸುತ್ತಿದ್ದೇನು. ಅದರಲ್ಲಿ 4 ಪುಟಗಳ ಜಾಹಿರಾತು ಪುರವಣಿ ಇತ್ತು. ನೋಡಿದಾಗ ಬಹಳ ಕುತೂಹಲ ಎನಿಸಿತು. ನಾಲ್ಕೂ ಪುಟಗಳಲ್ಲೂ ಸಹಕಾರ ಸಪ್ತಾಹದ ಶುಭ ಹಾರೈಕೆ ಹಾಗೂ ಸಹಕಾರಿ ಬ್ಯಾಂಕ್ ಗಳ ಜಾಹೀರಾತುಗಳು ರಾರಾಜಿಸುತ್ತಿದ್ದವು.

ಹಾಗೆ ಸೂಕ್ಷ್ಮವಾಗಿ ಗಮನಿಸಿದಾಗ, ಪ್ರತಿ ಸಹಕಾರಿ ಬ್ಯಾಂಕ್ ಗಳು ನಿವ್ವಳ ಆದಾಯ, ವಹಿವಾಟು, ಗರಿಷ್ಠ ಲಾಭದಲ್ಲೇ ಇದ್ದವು. ಒಂದು ಸಣ್ಣ ಜಿಲ್ಲೆಯಲ್ಲಿ ಇಷ್ಟು ಸಹಕಾರಿ ಬ್ಯಾಂಕ್ ಗಳಿವೆಯೆ? ಇದು ಹೇಗೆ ಸಾಧ್ಯ ಎಂಬ ಕುತೂಹಲ ಮೂಡಿತು. ಯಾವುದೋ ರಾಜಕೀಯ ಪಕ್ಷ ನಾಯಕರ ಸಾಧನೆ, ಜಾಹೀರಾತು ಇದ್ದರೆ ಅದು ವೈಯಕ್ತಿಕ ಎಂದು ಉದಾಸೀನ ಮಾಡಬಹುದಿತ್ತು.

ಕಲ್ಬುರ್ಗಿ ಜಿಲ್ಲೆ ಹಾಗೂ ಮಂಗಳೂರು ಜಿಲ್ಲೆ ಎರಡನ್ನು ಸಹಕಾರಿ ವ್ಯವಸ್ಥೆ ಆದರಿಸಿ ಹೋಲಿಸಿ ಅವಲೋಕನ ಮಾಡಿದಾಗ ಒಂದಷ್ಟು ಬೇಸರ ಮೂಡಿತು. ಕಲ್ಬುರ್ಗಿ ಜಿಲ್ಲೆ ಯಡ್ರಾಮಿಯಂತ ತೀರಾ ಹಿಂದುಳಿದ ತಾಲ್ಲೂಕಿನಲ್ಲಿ ಒಂದೇ ಒಂದು ಸಹಕಾರಿ ಬ್ಯಾಂಕ್ ಇಲ್ಲ. ಎಲ್ಲ ಜನರು ಆರ್ಥಿಕ ವ್ಯವಹಾರಕ್ಕಾಗಿ ಒಂದೇ ಒಂದು ‘ನ್ಯಾಷನಲ್ ಬ್ಯಾಂಕ್’ ಅವಲಂಬಿಸಬೇಕಿದೆ. ಎಲ್ಲ ಒತ್ತಡ, ಹೊರೆಯನ್ನು ಈ ಒಂದೇ ಬ್ಯಾಂಕ್ ಹೊರಬೇಕಿದೆ. ಒಂದೇ ಒಂದು ಸಹಕಾರಿ ಬ್ಯಾಂಕ್ ನ ಬೋರ್ಡ್ ಮಾರುಕಟ್ಟೆಯಲ್ಲಿ ಕಾಣದು. ಕಾಣದಂತೆ ಎಲ್ಲೋ ಇದ್ದರೂ, ಸಣ್ಣ ಬೋರ್ಡ್ ಇದ್ದರೂ ಅದು ಜವಾಬ್ದಾರಿಯಿಂದ ಆರ್ಥಿಕ ಚಟುವಟುಕೆ ಮಾಡದೇ ಪ್ರತಿ ವರ್ಷವೂ ನಷ್ಟದಲ್ಲೇ ನಡೆಯುವದು. ಮಂಗಳೂರಿನ ಸಹಕಾರಿ ಪ್ರಗತಿ ಇಲ್ಲೆಕೆ ಆಗಿಲ್ಲ? ಇದು ಏಕೆ ಹೀಗೆ? ಎಂಬ ಉತ್ತರಕ್ಕೆ ಪ್ರತಿ ಸಹಕಾರಿ ಸಂಘದ ಸದಸ್ಯನಾದಿಯಾಗಿ ಅದ್ಯಕ್ಷ ನಿರ್ದೇಶಕರು ಎಲ್ಲರೂ ಹೊಣೆಗಾರರೆ. ಆದರೆ, ಸೋಜಿಗ ಎಂದರೆ ಅದೇ ಪೈನಾನ್ಸ್ ಗಳ ಬೋರ್ಡ್ ಗಳು ಹೆಚ್ಚಾಗಿಯೆ ಈ ಭಾಗದಲ್ಲಿ ರಾರಾಜಿಸುತ್ತವೆ. ಇದಕ್ಕೂ ಹತ್ತು ಹಲವು ಕಾರಣಗಳು ಕೊಡಬಹುದು.

ಇದು ಒಂದು ಹೈದ್ರಾಬಾದ್ ಕರ್ನಾಟಕದ ಒಂದು ಊರಿನ ಕಥೆ ಅಲ್ಲ. ಬಹುತೇಕ ಊರಿನ ಹಣೆ ಬರಹವೂ ಹೀಗೆನೆ. ಬಹಳ ಸೂಕ್ಷ್ಮಾತೀ ಸೂಕ್ಷ್ಮವಾಗಿ ಗಮನಿಸಿದ್ರೆ ಅಧ್ಯಯನ ಮಾಡಿದ್ರೆ ಬಹುಷ್ಯ ಲೋಪ ದೋಷ ಅರಿವಾಗಬಹುದು.

ಮಂಗಳೂರು ಎಂಬ ಸಣ್ಣ ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕ್ ಗಳ ಬಹುದೊಡ್ಡ ಕ್ರಾಂತಿ ನಡೆದಿದೆ. ಕರ್ನಾಟಕ ಬ್ಯಾಂಕಿಗ್ ಕ್ಷೇತ್ರದ ತವರು ಎಂದೆ ಖ್ಯಾತಿ ಗಳಿಸಿದೆ. ಇಲ್ಲಿ ನ್ಯಾಷನಲ್ ಬ್ಯಾಂಕ್ ಗಳಿಗಿಂತ ಸಹಕಾರಿ ಬ್ಯಾಂಕ್ ಗಳ ಪಾರುಪತ್ಯವೇ ಹೆಚ್ಚು. ಜನರೂ ಸಹಕಾರಿ ವ್ಯವಸ್ಥೆ ನಂಬಿ ಒಪ್ಪಿ ಹಣ ಹುಡುತ್ತಾರೆ. ಅದು ಸಹಕಾರಿ ಬ್ಯಾಂಕ್ ಗಳ ಮೇಲೆ ಅವರು ಇಟ್ಟಿರುವ ಬರವಸೆ ಹಾಗೂ ನಂಬಿಕೆ, ವಿಶ್ವಾಸ.

ಸಹಕಾರಿ ಬ್ಯಾಂಕ್ ಗಳು ಹೆಚ್ಚಾಗಿವೆ ಎಂದರೆ, ಅದು ಕೇವಲ ಸಹಕಾರಿ ತತ್ವ ಅಥವಾ ಸಂಸ್ಥೆ ಪ್ರತಿನಿಧಿಸಲಾರದು. ಅದು ಆ ಪ್ರದೇಶದ ಜನರ ಮನಸ್ಥಿತಿ ಹಾಗೂ ಆರ್ಥಿಕ ಪ್ರಗತಿ ಪ್ರಾಮಾಣಿಕತೆ ಪ್ರತಿನಿಧಿಸುತ್ತದೆ. ಒಂದು ಸಹಕಾರಿ ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಲಾಭ ಗಳಿಸುತ್ತಿದೆ ಎಂದರೆ, ಅಲ್ಲಿರುವ ಸದಸ್ಯನಿಂದ ಹಿಡಿದು ಆಡಳಿತ ವ್ಯವ್ಯವಸ್ಥೆ ವರೆಗೂ ಬಹುತೇಕರು ಶುದ್ದ ಹಸ್ತರು ಎಂದು ಪರೋಕ್ಷವಾಗಿ ಅರ್ಥ ನೀಡುತ್ತದೆ.

ತುಳುನಾಡಿನ ಸಹಕಾರಿ ಸಂಘ ಸಂಸ್ಥೆಗಳು ಇಡಿ ಹೈದ್ರಾಬಾದ್ ಕರ್ನಾಟಕಕ್ಕೆ ಮಾದರಿಯಾಗಿವೆ. ಇಲ್ಲಿಯೂ ಸಾಕಷ್ಟು ಅಪವಾದಗಳಿದ್ದರೂ, ಇವರ ಆರ್ಥಿಕ ಪ್ರಗತಿಗೆ ಸಹಕಾರಿ ಸಂಘಗಳ ಕೊಡುಗೆ ಮಾತ್ರ ಬಹು ದೊಡ್ಡದಾಗಿದೆ. ಪ್ರತಿ ಸಣ್ಣ ಊರಿನಲ್ಲೂ ಒಂದಲ್ಲಾ ಒಂದು ಸಹಕಾರಿ ಸಂಘ ಬ್ಯಾಂಕ್ ಇದ್ದೇ ಇರುತ್ತದೆ. ಸಕ್ರೀಯವಾಗಿ ಸದಾ ವೈವಾಟು ನಡೆಸುತ್ತದೆ. ಸಹಕಾರಿ ಸಪ್ತಾಹದಡಿ ವಿವಿಧ ಸಹಕಾರಿ ಬ್ಯಾಂಕ್ ಗಳು ಪತ್ರಿಕೆಗೆ ನೀಡಿದ ಜಾಹಿರಾತುಗಳೇ ಇದಕ್ಕೆ ಸಾಕ್ಷೀಕರಿಸಬಹುದು.

ಸಹಕಾರ ತತ್ವ ಉಳಿಯಲಿ ಬೆಳೆಯಲಿ ಎಂದು ಬೊಬ್ಬೆ ಹಾಕಿ ಭಾಷಣ ಮಾಡುವದಕ್ಕಿಂತ, ಅದರ ಅದ್ಯಕ್ಷರಾಗಿ ನಿರ್ದೇಶಕರಾಗಿ ಅಧಿಕಾರದ ಗಾದಿ ಎರಬೇಕೆಂಬ ಆಸೆಗಿಂತ, ಸಹಕಾರಿ ಬ್ಯಾಂಕ್ ಉಳಿಸಿ ಬೆಳೆಸಿ ಸಾಕಷ್ಟು ಜನರ ಆರ್ಥಿಕ ಪ್ರಗತಿಗೆ ಬೆನ್ನೆಲುಬಾಗಿ ನಿಲ್ಲಲಿ ಎಂಬ ಸದಾಶಯ ಇದ್ದಾಗ ಮಾತ್ರ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಿದೆ. ಈ ಲೇಖನದ ಸದಾಶಯವೂ ಇದೆ ಆಗಿದೆ.

ಪ್ರಹ್ಲಾದ್ ವಾ ಪತ್ತಾರ, ಹವ್ಯಾಸಿ ಬರಹಗಾರರು, ಯಡ್ರಾಮಿ

Leave a Comment

Your email address will not be published. Required fields are marked *