Ad Widget .

ಮೈಸೂರು ವಿವಿಯಿಂದ ಮಹಾ ಎಡವಟ್ಟು| ಏಡ್ಸ್,ಕ್ಯಾನ್ಸರ್ ಗೆ ಸ್ವಮೂತ್ರಪಾನವೇ ಮದ್ದಂತೆ!!

ಸಮಗ್ರ ನ್ಯೂಸ್: ಮೈಸೂರು ವಿಶ್ವವಿದ್ಯಾಲಯದ ಪಠ್ಯ ಪುಸ್ತಕ ಇದೀಗ ಚರ್ಚೆಗೆ ಗ್ರಾಸವಾಗಿದೆ. ಬಿಎ ಪದವಿಯ ವೈದ್ಯಕೀಯ ಸಮಾಜಶಾಸ್ತ್ರ ಪುಸ್ತಕದ ಅಧ್ಯಾಯವೊಂದರಲ್ಲಿ ಏಡ್ಸ್, ಕ್ಯಾನ್ಸರ್​ಗೆ ಸ್ವಮೂತ್ರಪಾನವೇ ಮದ್ದು ಎಂದು ಬರೆಯಲಾಗಿದೆ.

Ad Widget . Ad Widget .

ಅಲ್ಲದೇ ಮೂತ್ರ ಚಿಕಿತ್ಸೆಯು ಪ್ರಕೃತಿ ಚಿಕಿತ್ಸೆಯ ಒಂದು ಭಾಗವಾಗಿದ್ದು, ಸ್ವಮೂತ್ರಪಾನದಿಂದ ಕಣ್ಣು, ಕಿವಿ, ಹಲ್ಲು, ಚರ್ಮ ರೋಗಗಳನ್ನು ನಿಯಂತ್ರಿಸಬಹುದು ಎಂದು ಹೇಳಲಾಗಿದೆ. ಇದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯಕ್ರಮದ ಅನ್ವಯ ಈ ಅಧ್ಯಾಯ ಸೇರ್ಪಡೆಯಾಗಿದೆ.

Ad Widget . Ad Widget .

ಚಿಕಿತ್ಸೆಯ ಮಹತ್ವ ಮತ್ತು ವಿವರಿಸಲು ಲೇಖನದಲ್ಲಿ ಹಲವು ಸಾಧಕರ ಹೆಸರು ಬಳಸಿಕೊಳ್ಳಲಾಗಿದೆ. ಭಾರತದ ಮಾಜಿ ಪ್ರಧಾನಿ ದಿವಂಗತ ಮೊರಾರ್ಜಿ ದೇಸಾಯಿ ಅವರು ಈ ಪದ್ದತಿಯನ್ನು ಅನುಸರಿಸುತ್ತಿದ್ದರು ಎಂದು ಬರೆಯಲಾಗಿದೆ. ಸಂಸ್ಕೃತ ಸಾಹಿತ್ಯ ನಿಧಿಯಲ್ಲಿ ಶಿವಾಂಬು ಸಂಹಿತೆಯಲ್ಲಿ ಈ ಬಗ್ಗೆ ಮಾಹಿತಿ ದೊರೆಯುತ್ತದೆ ಎಂದು ಉಲ್ಲೇಖಿಸಲಾಗಿದೆ.

ಸ್ವಮೂತ್ರ ಪಾನವಲ್ಲದೇ, ಗೋಮೂತ್ರದ ಮಹತ್ವವನ್ನು ಸಾರಲಾಗಿದೆ. ಪ್ರೊ.ಭೈರಪ್ಪ ಬರೆದಿರುವ ವೈದ್ಯಕೀಯ ಸಮಾಜಶಾಸ್ತ್ರ ಪುಸ್ತಕದಲ್ಲಿ ಈ ಬಗ್ಗೆ ಬರೆಯಲಾಗಿದ್ದು, ನಾವು ಪಾರಂಪರಿಕ ವೈದ್ಯ ಪದ್ಧತಿಯ ಯೋಗ,ಯುನಾನಿ ಇತರೆ ವಿಧಾನಗಳಷ್ಟೇ ಪಾಠ ಮಾಡುತ್ತಿದ್ದೇವೆ ಎಂದು ಪ್ರಾಧ್ಯಾಪಕರು ಹೇಳಿದ್ದಾರೆ.

Leave a Comment

Your email address will not be published. Required fields are marked *