Ad Widget .

ಇಂಡೋನೇಷ್ಯಾದಲ್ಲಿ ಪ್ರಬಲ‌ ಭೂಕಂಪ| 44 ಜನ ಸಾವು, 300ಕ್ಕೂ ಹೆಚ್ಚು ಮಂದಿ ಗಂಭೀರ

ಸಮಗ್ರ ನ್ಯೂಸ್: ಇಂಡೋನೇಷ್ಯಾದ ಪಶ್ಚಿಮ ಜಾವಾ ದ್ವೀಪದಲ್ಲಿ ಭಾರೀ ಭೂಕಂಪ ಸಂಭವಿಸಿದೆ. ಇಲ್ಲಿನ ಸಾಸಿಯಾಜೂರ್ ಪ್ರದೇಶದಲ್ಲಿ 49 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ್ದು, ಈ ಭೂಕಂಪದಲ್ಲಿ ಕನಿಷ್ಠ 44 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 300 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Ad Widget . Ad Widget .

ಘಟನೆಯಲ್ಲಿ ಹಲವು ಆಸ್ತಿಪಾಸ್ತಿ‌ ನಷ್ಟ ಉಂಟಾಗಿರುವ ಸಾಧ್ಯತೆ‌ ಇದ್ದು ಗಾಯಾಳುಗಳನ್ನ ಆಸ್ಪತ್ರೆಗೆ ಸ್ಥಳಾಂತರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

Ad Widget . Ad Widget .

ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 6.9 ರಿಂದ 5.6 ರ ನಡುವೆ ಇತ್ತು. ಭೂಕಂಪದಿಂದಾಗಿ ಸಾವಿರಾರು ಮನೆಗಳು ಬುಡಸಮೇತ ಕಿತ್ತುಹೋಗಿವೆ. ಕಟ್ಟಡಗಳು ಕುಸಿಸಿದ್ದು, ಒಂದು ಶಾಲೆ ನಾಶವಾಗಿದೆ. ಜನರು ಭಯಭೀತರಾಗಿ ರಸ್ತೆಗಳಿಗೆ ಧಾವಿಸಿದ್ದಾರೆ.

ಜಾಗೃತ ಅಧಿಕಾರಿಗಳು ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಇನ್ನೂ ಕೆಲವರು ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

Leave a Comment

Your email address will not be published. Required fields are marked *