Ad Widget .

ಅರಣ್ಯದೊಳಗೆ ಯುವಜೋಡಿಯ ನಗ್ನ ಶವ ಪತ್ತೆ!!

ಸಮಗ್ರ ನ್ಯೂಸ್: ಅರಣ್ಯದಲ್ಲಿ ನಗ್ನ ಸ್ಥಿತಿಯಲ್ಲಿ ಯುವಕ ಮತ್ತು ಯುವತಿಯ ಮೃತದೇಹ ಪತ್ತೆಯಾದ ಘಟನೆ ರಾಜಸ್ಥಾನದ ಉದಯ್​ಪುರ ಜಿಲ್ಲೆಯಲ್ಲಿ ನಡೆದಿದೆ.

Ad Widget . Ad Widget .

ಯುವಕನ ಗುಪ್ತಾಂಗವನ್ನೂ ಕತ್ತರಿಸಿದ ಸ್ಥಿತಿಯಲ್ಲಿ ವಶ ಪತ್ತೆಯಾಗಿದ್ದು, ಈ ಜೋಡಿಯನ್ನು ಕೊಲೆ ಮಾಡಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.

Ad Widget . Ad Widget .

ಇಲ್ಲಿನ ಗೋಗುಂಡಾ ಪೊಲೀಸ್ ಠಾಣೆ ವ್ಯಾಪ್ತಿಯ ಉಬೇಶ್ವರ್​ಜಿ ಕಾಡಿನಲ್ಲಿ ಶುಕ್ರವಾರ ಯುವಕ ಮತ್ತು ಯುವತಿ ಶವಗಳು ಪತ್ತೆಯಾಗಿವೆ. ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಸ್ಥಳೀಯ ಪೊಲೀಸರು ಮತ್ತು ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ, ಎಫ್‌ಎಸ್‌ಎಲ್ ತಂಡ, ಶ್ವಾನ ದಳ ಕೂಡ ಸ್ಥಳ ಪರಿಶೀಲನೆ ನಡೆಸಿದೆ.

ಸದ್ಯ ಈ ಮೃತದೇಹಗಳು ಗುರುತು ಪತ್ತೆಯಾಗಿಲ್ಲ. ಎರಡು ದಿನಗಳ ಹಿಂದೆಯೇ ಕೊಲೆ ಮಾಡಿ ಮೃತದೇಹಗಳನ್ನು ಎಸೆದಿರುವ ಸಾಧ್ಯತೆ ಇದೆ. ಈ ಬಗ್ಗೆ ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ

Leave a Comment

Your email address will not be published. Required fields are marked *