Ad Widget .

ಬಪ್ಪನಾಡು ದುರ್ಗಾಪರಮೇಶ್ವರಿ ಕೃಪೆಯಿಂದ ಬೆಳೆದೆ – ಸುನಿಲ್ ಶೆಟ್ಟಿ

ಸಮಗ್ರ ನ್ಯೂಸ್: ಮಂಗಳೂರಿನ ಮುಲ್ಕಿಯಲ್ಲಿ ಹುಟ್ಟಿದ್ದೆ, ಬಪ್ಪನಾಡಿನ‌ ದುರ್ಗಾ ದೇವಿಯ ಕೃಪೆಯಲ್ಲಿ ಬೆಳೆದೆ ಎಂದು ಬಾಲಿವುಡ್ ನಟ ಸುನಿಲ್ ಶೆಟ್ಟಿ ತಮ್ಮ ಬಾಲ್ಯವನ್ನು ಸ್ಮರಿಸಿಕೊಂಡರು.

Ad Widget . Ad Widget .

ಬೆಂಗಳೂರು ತಂತ್ರಜ್ಞಾನ ಸಮ್ಮೇಳನದಲ್ಲಿನ‌ ಸಂವಾದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತ, ತಂದೆಯೇ ನನ್ನ ಹೀರೋ ಆಗಿದ್ದಾರೆ. ಅವರು ತಮ್ಮ 9ನೇ ವಯಸ್ಸಿನಲ್ಲಿ ಮುಂಬೈಗೆ ತೆರಳಿ ಅನೇಕ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡಿದ್ದರು. ಅಲ್ಲಿ ಟೇಬಲ್ ಕ್ಲೀನ್‌ ಮಾಡುತ್ತಿದ್ದರು. ಐಸ್ ಬ್ಯಾಗ್ ಮೇಲೆ‌ ಮಲಗುತ್ತಿದ್ದರು. ಅವರು ಯಾವ ರೆಸ್ಟೋರೆಂಟ್​ನಲ್ಲಿ ಕೆಲಸ‌ ಮಾಡುತ್ತಿದ್ದರೋ ಬಳಿಕ ಅದೇ ರೆಸ್ಟೋರೆಂಟ್​​ನ‌ ಮಾಲೀಕರಾದರು. ನಮ್ಮ ಹೊಟ್ಟೆ ತುಂಬಿಸಲು ಅವರು ಸಾಕಷ್ಟು ಕಷ್ಟಪಟ್ಟಿದ್ದರು‌ ಎಂದು ಸ್ಮರಿಸಿದರು.

Ad Widget . Ad Widget .

ಸುನಿಲ್ ಶೆಟ್ಟಿ ವಿವಾದಕ್ಕೊಳಗಾದರೆ ಮಾಧ್ಯಮದವರು ಟಿಆರ್​​ಪಿಗಾಗಿ ಸುದ್ದಿ ಮಾಡುತ್ತಾರೆ. ನಾನೊಬ್ಬ ಉತ್ತಮ ನಟನಲ್ಲ ಎಂದು ಹಲವರು ಟೀಕಿಸಿದ್ದರು. ಬಳಿಕ ನನ್ನ ನಟನೆ ಸುಧಾರಿಸಿಕೊಂಡೆ.

ವೃತ್ತಿ ಜೀವನದಲ್ಲಿ ಹೆಚ್ಚು ನಿಷ್ಠಾವಂತನಾಗಿದ್ದೇನೆ, ಗುರಿ ಏನೆಂಬುದು ಗೊತ್ತಿದೆ. ಆ ಗುರಿ ಸಾಧಿಸಲು‌ ನಾನು ಪರಿಶ್ರಮ ಪಡುತ್ತಿದ್ದೆ, ಯಾವತ್ತೂ ಜೀವನದಲ್ಲಿ ತೃಪ್ತನಾಗಿದ್ದೇನೆ ಎಂದರು.

Leave a Comment

Your email address will not be published. Required fields are marked *