ಸಮಗ್ರ ನ್ಯೂಸ್: ಶಾಲೆಗೆ ಮುಗಿದ ನಂತರ ನಾಪತ್ತೆಯಾಗಿದ್ದ ಏಳನೇ ತರಗತಿ ವಿದ್ಯಾರ್ಥಿನಿ ನಂದಿತಾ ಇದೀಗ ತುಮಕೂರಿನಲ್ಲಿ ಪತ್ತೆಯಾಗಿದ್ದಾಳೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಅಣತಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ನಂದಿತಾ, ಸರ್ಕಾರಿ ಹಾಸ್ಟೆಲ್‍ನಲ್ಲಿದ್ದಳು. ನ. 7ರಂದು ಸಂಜೆ 5 ಗಂಟೆ ಸುಮಾರಿಗೆ ಶಾಲೆ ಮುಗಿಸಿ ಹಾಸ್ಟೆಲ್‍ಗೆ ಹೋಗದೆ ನಾಪತ್ತೆಯಾಗಿದ್ದಳು. ಆದರೆ ಶುಕ್ರವಾರ ಸಂಜೆ ಬಾಲಕಿ ನಂದಿತಾ ತುಮಕೂರಿನಲ್ಲಿ ಪತ್ತೆಯಾಗಿದ್ದು, ನುಗ್ಗೇಹಳ್ಳಿ ಪೊಲೀಸರು ಬಾಲಕಿಯನ್ನು ಕರೆತಂದಿದ್ದಾರೆ.
ತುಮಕೂರಿನಲ್ಲಿ ಅಳುತ್ತಾ ನಿಂತಿದ್ದ ಬಾಲಕಿಯನ್ನು ಮಹಿಳೆಯೊಬ್ಬರು ಮನೆಗೆ ಕರೆದುಕೊಂಡು ಹೋಗಿ ಇಟ್ಟುಕೊಂಡು ಹೋಗಿದ್ದರು. ಶುಕ್ರವಾರ ತುಮಕೂರಿನಲ್ಲಿ ಮಹಿಳೆ ಜೊತೆ ದೇವಸ್ಥಾನಕ್ಕೆ ತೆರಳಿದ್ದ ನಂದಿತಾಳನ್ನು ಕಂಡು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ತುಮಕೂರಿಗೆ ತೆರಳಿ ಬಾಲಕಿಯನ್ನು ಪೊಲೀಸರು ಕರೆತಂದಿದ್ದಾರೆ.
ಮೂಲತಃ ಕೆ.ಆರ್.ಪೇಟೆ, ತಾಲೂಕಿನ ನಂಜೇಗೌಡ ಮಂಗಳ ದಂಪತಿ ಪುತ್ರಿ ನಂದಿತಾಳನ್ನು ತಾತ ಚನ್ನರಾಯಪಟ್ಟಣ ದಾಸರಹಳ್ಳಿ ಗ್ರಾಮದ ಕುಮಾರ್ ಸಾಕಿಕೊಂಡು ವಿದ್ಯಾಭ್ಯಾಸ ಕೊಡಿಸುತ್ತಿದ್ದರು. ನ. 7 ಸೋಮವಾರದಂದು ಶಾಲೆಗೆ ಬಂದಿದ್ದ ನಂದಿತಾ ಸಂಜೆಯವರೆಗೂ ಶಾಲೆ ಮುಗಿಸಿ ವಾಪಸ್ ಹೋಗಿದ್ದಾಳೆ. ಶಿಕ್ಷಕರು ವಿದ್ಯಾರ್ಥಿಗಳೆಲ್ಲಾ ಹೋದ ಕೆಲಹೊತ್ತಿನಲ್ಲೇ ವಾಪಸ್ ಶಾಲೆಗೆ ಬಂದಿರುವ ನಂದಿತಾ ಶಾಲಾ ಆವರಣದಲ್ಲಿ ಬ್ಯಾಗ್ ಇಟ್ಟು ದಿಢೀರ್ ಕಾಣಿಯಾಗಿದ್ದಳು.
ಈ ಸಂಬಂಧ ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೀಗ ಸಾಕು ಮಗಳು ಹಾಗೂ ವಿದ್ಯಾರ್ಥಿನಿ ಪತ್ತೆಯಾಗಿದ್ದು ಆತಂಕಗೊಂಡಿದ್ದ ಪೋಷಕರು ಹಾಗೂ ಶಿಕ್ಷಕರು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.