Ad Widget .

ಧರ್ಮಸ್ಥಳ: ಇಂದಿನಿಂದ ಲಕ್ಷದೀಪೋತ್ಸವ ಸಂಭ್ರಮ

ಸಮಗ್ರ ನ್ಯೂಸ್: ಶ್ರೀ‌‌ಕ್ಷೇತ್ರ ಧರ್ಮಸ್ಥಳದಲ್ಲಿ ಇಂದಿನಿಂದ ಲಕ್ಷ ದೀಪೋತ್ಸವ ಕಾರ್ಯಕ್ರಮ ಆರಂಭವಾಗಲಿದ್ದು, ನವೆಂಬರ್ 23ರ ವರೆಗೆ ಇದು ನಡೆಯಲಿದೆ. ಐದು ದಿನಗಳ ಕಾಲ ನಡೆಯುವ ದೀಪೋತ್ಸವ ಕಾರ್ಯಕ್ರಮದಲ್ಲಿ ಪ್ರತಿನಿತ್ಯ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

Ad Widget . Ad Widget .

ನವೆಂಬರ್ 19ರ ಇಂದು ರಾತ್ರಿ 9:00 ಗಂಟೆಗೆ ಹೊಸ ಕಟ್ಟೆ ಉತ್ಸವ ನಡೆಯಲಿದ್ದು, ನವೆಂಬರ್ 20 ರಂದು ಕೆರೆಕಟ್ಟೆ ಉತ್ಸವ, ನವೆಂಬರ್ 21ರಂದು ಲಲಿತೋದ್ಯಾನ ಉತ್ಸವ, ನವೆಂಬರ್ 22ರಂದು ಕಂಚಿ ಮಾರುಕಟ್ಟೆ ಉತ್ಸವ, ನವೆಂಬರ್ 23ರಂದು ಗೌರಿಮಾರು ಕಟ್ಟೆ ಉತ್ಸವ ಹಾಗೂ ನವೆಂಬರ್ 24ರಂದು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಸಮಾವಸರಣ ಪೂಜೆ ನಡೆಯಲಿದೆ.

Ad Widget . Ad Widget .

ಇಂದು ಬೆಳಗ್ಗೆ 10:30ಕ್ಕೆ ಮಂಜುನಾಥೇಶ್ವರ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಶಾಸಕ ಹರೀಶ್ ಪೂಂಜಾ ರಾಜ್ಯಮಟ್ಟದ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಉಪಸ್ಥಿತರಿರಲಿದ್ದಾರೆ.

Leave a Comment

Your email address will not be published. Required fields are marked *