ಸಮಗ್ರ ನ್ಯೂಸ್: ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ವಿವಾದ ಸಂಬಂಧ ರಾಜ್ಯ ಸರ್ಕಾರ ಆಡಳಿತ ಮಂಡಳಿ ರಚನೆ ಮಾಡಿ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರವು ಸುಮಾರು 3 ದಶಕಗಳಿಂದ ವಿವಾದಿತ ಸ್ಥಳವಾಗಿರುವ ಪೀಠಕ್ಕೆ ಓರ್ವ ಮುಸ್ಲಿಂ ಸೇರಿದಂತೆ 8 ಜನ ಸದಸ್ಯರಿರುವ ವ್ಯವಸ್ಥಾಪನಾ ಸಮಿತಿ ರಚಿಸಿ ಆದೇಶ ಹೊರಡಿಸಿದೆ.
ವ್ಯವಸ್ಥಾಪನಾ ಸಮಿತಿಯಲ್ಲಿ ಕೆ.ಸತೀಶ್, ಸಿ.ಜಿ. ಲೀಲಾ, ಶೀಲಾ, ಎನ್.ಎಸ್.ಸುಮಂತ್, ಕೆ.ಎಸ್.ಗುರುವೇಶ್, ಜಿ. ಎಚ್.ಹೇಮಂತ್‌ಕುಮಾರ್, ಎಸ್.ಎಂ.ಭಾಷಾ, ಸಿ.ಎಸ್.ಚೇತನ್ ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಸದಸ್ಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಆದೇಶದಲ್ಲಿ ತಿಳಿಸಿದ್ದಾರೆ.
ಒಟ್ಟಾರೆ ಕಳೆದ ಹಲವು ವರ್ಷಗಳಿಂದ ವಿವಾದಕ್ಕೆ ಎಡೆಮಾಡಿಕೊಡುತ್ತಿದ್ದ ದತ್ತಪೀಠ, ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ಆಡಳಿತ ಮಂಡಳಿಯ ನೇಮಕಾತಿ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡುವ ಪ್ರಕ್ರಿಯೆ ಎಂದು ಹೇಳಲಾಗುತ್ತಿದೆ. ಇನ್ನು ಮುಂದೆ ಈ ಸ್ಥಳದಲ್ಲಿ ಆರಾಧನೆ ಮತ್ತು ಆಚರಣೆಯ ಜವಾಬ್ದಾರಿ ಹೊಸ ಆಡಳಿತ ಮಂಡಳಿಯ ಮೇಲೆ ಇರಲಿದೆ. ಇದೇ ತಿಂಗಳಾಂತ್ಯದಿಂದ ದತ್ತ ಜಯಂತಿ ಆರಂಭವಾಗಲಿದ್ದು, ಅದಕ್ಕೂ ಮೊದಲು ಸರ್ಕಾರದ ನಡೆ ಜಾಣ್ಮೆ ಮೆರೆದಿದೆ.