Ad Widget .

ಉಡುಪಿ: ಭಾರತದ ತಂಟೆಗೆ ಬಂದ್ರೆ ನಾವು ಮುಖಮೂತಿ ನೋಡಲ್ಲ|ಶತ್ರು ರಾಷ್ಟ್ರಗಳಿಗೆ ರಾಜನಾಥ್ ಸಿಂಗ್ ಎಚ್ಚರಿಕೆ

ಸಮಗ್ರ ನ್ಯೂಸ್: ಆ ಕಾಲ ಹೋಯ್ತು..ಇಡೀ ಪ್ರಪಂಚ ಭಾರತದ ಮಾತು ಕೇಳುವ ಕಾಲ ಬಂದಿದೆ ಹಾಗಾಗಿ ಭಾರತದ ತಂಟೆಗೆ ಬಂದ್ರೆ ನಾವು ಮುಖಮೂತಿ ನೋಡಲ್ಲ ಎಂದು ಶತ್ರು ರಾಷ್ಟ್ರಗಳಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

Ad Widget . Ad Widget .

ಉಡುಪಿಯ ಮಣಿಪಾಲ ಮಾಹೆ ವಿವಿಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಜನಾಥ್ ಸಿಂಗ್, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಐದು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಿ ಮಾತನಾಡಿದರು.

Ad Widget . Ad Widget .

ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಭಾರತ ನಾಯಕತ್ವ ವಹಿಸಿದೆ. ಕಾಲು ಕೆರೆದುಕೊಂಡು ನಾವು ಯಾರ ಜೊತೆಯೂ ತಗಾದೆ ಶುರು ಮಾಡುವುದಿಲ್ಲ. ಭಾರತದ ತಂಟೆಗೆ ಬಂದರೆ ಮುಖಮೂತಿ ನೋಡದೆ ಉತ್ತರ ಕೊಡುತ್ತೇವೆ ಎಂದರು.

ಐದು ವರ್ಷದಲ್ಲಿ ವಿಶ್ವದ ಮೂರನೇ ಆರ್ಥಿಕ ದೇಶವಾಗಿ ಭಾರತ ಸದೃಢವಾಗಿ ನಿಲ್ಲಲಿದೆ. ಭಾರತ 2047ಕ್ಕೆ ಪ್ರಪಂಚದ ಮೊದಲ ಸ್ಥಾನದಲ್ಲಿರಲಿದೆ. ದೇಶವನ್ನು ಐದು ಟ್ರಿಲಿಯನ್ ಆರ್ಥಿಕ ರಾಷ್ಟ್ರ ಮಾಡುವುದು ಪ್ರಧಾನಿ ಮೋದಿ ಕನಸು. ದೇಶದ ಯುವಜನಾಂಗ ಇದಕ್ಕೆ ಕೊಡುಗೆ ನೀಡುತ್ತಿದ್ದೇವೆ. ಗ್ಲೋಬಲ್ ಸಿಟಿಜನ್ ನಿರ್ಮಿಸಲು ಎನ್‌ಇಪಿ ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.

ಮಾಹೆ ವಿವಿಯ ಸತ್ಯ ನಾದೆಲ್ಲಾ ಮೈಕೋಸಾಫ್ಟ್‌ನ ನೇತೃತ್ವ ವಹಿಸಿದ್ದಾರೆ. ಮೈಕ್ರೋಸಾಫ್ಟ್ ಮೀರಿಸುವಂತಹ ಕಂಪನಿ ಭಾರತದಲ್ಲಿ ಸ್ಥಾಪನೆ ಆಗಬೇಕು. ಅಂತಾರಾಷ್ಟ್ರೀಯ ಕಂಪನಿ ಸಿಇಒಗಳು ಭಾರತ ಮೂಲದವರು ಎಂಬುದು ನಮ್ಮ ಹೆಗ್ಗಳಿಕೆ ಎಂದು ಮಾತನಾಡಿದರು.

Leave a Comment

Your email address will not be published. Required fields are marked *