ನ್ಯೂಯಾರ್ಕ್: ಆನ್‌ಲೈನ್‌ನಲ್ಲಿ ಸೆಕೆಂಡ್ ಹ್ಯಾಂಡ್ ಜೀನ್ಸ್ ಆರ್ಡರ್ ಮಾಡಿದ ಮಹಿಳೆಗೆ ಬ್ಯಾಗ್ ತುಂಬಾ ಈರುಳ್ಳಿ ಬಂದಿದೆ. ಇದನ್ನು ನೋಡಿ ಮಹಿಳೆ ಶಾಕ್ ಆಗಿದ್ದಾರೆ.
ಬ್ರಿಟಿಷ್ ಸೆಕೆಂಡ್ ಹ್ಯಾಂಡ್ ಫ್ಯಾಶನ್ ಸೈಟ್ ಡೆಪಾಪ್‌ನಲ್ಲಿ ಮಹಿಳೆ ಜೀನ್ಸ್ ಅನ್ನು ಆರ್ಡರ್ ಮಾಡಿದ್ದಾರೆ. ಆದರೆ ಅವರಿಗೆ ಬ್ಯಾಗ್ ತುಂಬಾ ಈರುಳ್ಳಿ ಪಾರ್ಸೆಲ್ ಬಂದಿದೆ. ಇದನ್ನು ಕಂಡು ಅಚ್ಚರಿಗೊಂಡ ಮಹಿಳೆ, ಮಾರಾಟಗಾರರನ್ನು ಸಂಪರ್ಕಿಸಿ ಪ್ರಶ್ನಿಸಿದ್ದಾರೆ. ಅವರು ಕೂಡ ಗೊಂದಲಕಾರಿ ಉತ್ತರವನ್ನು ನೀಡಿದ್ದಾರೆ. ಈರುಳ್ಳಿ ಹೇಗೆ ಬಂತು ಎಂಬುದು ನಮಗೂ ಗೊತ್ತಿಲ್ಲ ಎಂದು ಮಹಿಳೆಗೆ ತಿಳಿಸಿದ್ದಾರೆ.
ಘಟನೆ ಕುರಿತು ಮಹಿಳೆ ಮಾರಾಟಗಾರರೊಂದಿಗೆ ತನ್ನ ಚಾಟ್‌ನ ತುಣುಕನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. “ನಾನು ಆರ್ಡರ್ ಮಾಡಿದ ಜೀನ್ಸ್ ಬದಲಿಗೆ ಈರುಳ್ಳಿ ಇರುವ ಪಾರ್ಸೆಲ್ ಏಕೆ ಬಂದಿದೆ?” ಎಂದು ಮಾರಾಟಗಾರರನ್ನು ಮಹಿಳೆ ಪ್ರಶ್ನಿಸಿದ್ದಾರೆ. “ಈ ಬಗ್ಗೆ ನಮಗೂ ಗೊಂದಲವಿದೆ. ತಪ್ಪಾದ ಆರ್ಡರ್ ಬಂದಿರುವುದಕ್ಕೆ ಕ್ಷಮೆಯಾಚಿಸುತ್ತೇವೆ” ಎಂದು ಮಾರಾಟಗಾರ ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಪೋಸ್ಟ್‌ಗೆ ಕೆಲವರು ತಮಾಷೆಯಾಗಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. “ಇದು ತುಂಬಾ ತಮಾಷೆಯಾಗಿದೆ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. “ಉಚಿತ ಈರುಳ್ಳಿ? ಈ ಆರ್ಥಿಕತೆಯಲ್ಲಿ? ವ್ಹಾವ್” ಎಂದು ಮತ್ತೊಬ್ಬರು ಕಾಮೆಂಟ್ ಹಾಕಿದ್ದಾರೆ.