Ad Widget .

“ವಶೀಕರಣ ಸ್ಪೆಷಲಿಸ್ಟ್ಗೆ” ಮಹಾ ಮಂಗಳಾರತಿ|ನಕಲಿ ಜ್ಯೋತಿಷಿಯ ಚಳಿ ಬಿಡಿಸಿದ ಸಾಮಾಜಿಕ ಕಾರ್ಯಕರ್ತ

ಸಮಗ್ರ ನ್ಯೂಸ್: ಸೋಷಿಯಲ್ ಮೀಡಿಯಾದಲ್ಲಿ “ವಶೀಕರಣ ಸ್ಪೆಷಲಿಸ್ಟ್” ಎಂದು ತೀರಾ ಅಶ್ಲೀಲವಾಗಿ ಜಾಹೀರಾತು ಹಾಕಿಕೊಂಡಿದ್ದಲ್ಲದೆ ಮಂಗಳೂರಿನ ಸ್ಟೇಟ್ ಬ್ಯಾಂಕ್, ಹಂಪನಕಟ್ಟೆ ಹಾಗೂ ಉಡುಪಿಯನ್ನು ಕಾರ್ಯಸ್ಥಾನ ಮಾಡಿಕೊಂಡಿದ್ದ ನಕಲಿ ಜ್ಯೋತಿಷಿಗೆ ಸಾಮಾಜಿಕ ಕಾರ್ಯಕರ್ತ ದೀಪು ಶೆಟ್ಟಿಗಾರ್ ಎಂಬವರು ಮಂಗಳಾರತಿ ಮಾಡಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Ad Widget . Ad Widget .

ಕೇರಳ, ಶಿವಮೊಗ್ಗ, ಭದ್ರಾವತಿ, ಮೈಸೂರು, ಬೆಂಗಳೂರು, ಕೊಳ್ಳೇಗಾಲ ಕಡೆಯಿಂದ ಮಂಗಳೂರಿಗೆ ವಕ್ಕರಿಸುವ ಇವರು ಆಡಿದ್ದೇ ಆಟ ಎಂಬಂತಾಗಿದ್ದು ನಗರದ ಪ್ರಮುಖ ನಿಲ್ದಾಣಗಳಲ್ಲಿ ಲಾಡ್ಜ್, ಎಸಿ ರೂಮ್‌ಗಳಲ್ಲಿ ತಂಗುವ ಇವರು ಸ್ತ್ರೀ ವಶೀಕರಣ, ಮಾಟ ಮಂತ್ರ ಎನ್ನುತ್ತಾ ಅದೆಷ್ಟೋ ಸಂಸಾರ ಹಾಳು ಮಾಡಿರುವ ಉದಾಹರಣೆಗಳಿವೆ.

Ad Widget . Ad Widget .

ಅತ್ಯಾಚಾರ, ಲೈಂಗಿಕ ದೌರ್ಜನ್ಯದಲ್ಲೂ ತೊಡಗಿಕೊಂಡಿದ್ದು ಮಂಗಳೂರಿಗೆ ಕಪ್ಪು ಚುಕ್ಕೆಯಾಗಿದೆ.
ನಗರದಲ್ಲಿ ಬರೋಬ್ಬರಿ 60ಕ್ಕೂ ಹೆಚ್ಚು ಕಪಟ ಜ್ಯೋತಿಷಿಗಳು ಇದ್ದು ಇದರಲ್ಲಿ ಒಬ್ಬಾತ ತನ್ನ ಮೊಬೈಲ್ ನಂಬರ್ ಹಾಕಿಕೊಂಡು (೯೪೪೯೨೨೯೮೬೭) 100% ಶೇ. ಪರಿಹಾರ, ಸ್ತ್ರೀ ವಶೀಕರಣ ಎನ್ನುತ್ತಾ ಜಾಹೀರಾತು ಹಾಕಿದ್ದು ಇದನ್ನು ನೋಡಿ ಕರೆ ಮಾಡಿದ ಸಾಮಾಜಿಕ ಕಾರ್ಯಕರ್ತ ದೀಪು ಶೆಟ್ಟಿಗಾರ್ ಎಂಬವರು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮದುವೆಯಾದ ಹೆಣ್ಣುಮಕ್ಕಳನ್ನು ವಶೀಕರಣ ಮಾಡಿಕೊಡುತ್ತೇನೆ, 12000 ಕೊಡಿ ಎನ್ನುವುದು ಆಡಿಯೋದಲ್ಲಿದ್ದು ನಗರದಲ್ಲಿ ಜಂಡಾ ಊರಿರುವ ಇಂತವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇನ್ನೂ ಇಂತಹ ನಕಲಿ ಜ್ಯೋತಿಷರು ಹಣಕ್ಕಾಗಿ ಕುಟುಂಬ ಸಂಸಾರವನ್ನೆ ಒಡೆದು ಹಾಕಬಹುದು ಹಾಗಾಗಿ ಇಂತವರ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರುವುದು ಒಳಿತು.

Leave a Comment

Your email address will not be published. Required fields are marked *