Ad Widget .

ನ. 20ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ನಿರ್ಬಂಧ

ಸಮಗ್ರ ನ್ಯೂಸ್: ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಚಂಪಾಷಷ್ಟಿ ಮಹೋತ್ಸವ ಪೂರ್ವ ಕಾರ್ಯಕ್ರಮಗಳು ನ.20ರಿಂದ ಆರಂಭಗೊಳ್ಳಲಿದ್ದು, ದೇವರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

Ad Widget . Ad Widget .

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ. 20ರಂದು ಬೆಳಗ್ಗೆಯಿಂದ ಮಧ್ಯಾಹ್ನ 2 ಘಂಟೆಗಳ ಕಾಲ ದರ್ಶನಕ್ಕೆ ನಿರ್ಬಂಧಿಸಲಾಗಿದೆ. ಚಂಪಾಷಷ್ಥಿ ವಾರ್ಷಿಕ ಮೂಲಮೃತ್ತಿಕೆಯ ಪ್ರಸಾದ ತೆಗೆಯುವ ಆಚರಣೆಯ ಕಾರಣದಿಂದ ದರ್ಶನಕ್ಕೆ ನಿರ್ಬಂಧ ಮಾಡಲಾಗಿದೆ. ಕಳೆದೆರಡು ವರ್ಷಗಳಿಂದ ಕರೋನಾ ಹಿನ್ನೆಲೆಯಿಂದ ಎಡೆಸ್ನಾನ ಸೇವೆಗೆ ನಿರ್ಬಂಧಿಸಲಾಗಿತ್ತು. ಈ ವರ್ಷ ಎಡೆಸ್ನಾನ ಸೇವೆಗೆ ಆವಕಾಶ ನೀಡಲಾಗಿದೆ.

Ad Widget . Ad Widget .

ಉಳಿದ ದಿನಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ. ನ.29ರ ಮಾರ್ಗಶಿರ ಶುದ್ದ ಷಷ್ಟಿಯ ದಿನ ಬ್ರಹ್ಮರಥೋತ್ಸವ ಜರುಗಲಿದ್ದು, ದೇಗುಲದಲ್ಲಿ ವಿವಿಧ ಧಾರ್ಮಿಕ, ವೈದಿಕ ಕಾರ್ಯಕ್ರಮಗಳ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

Leave a Comment

Your email address will not be published. Required fields are marked *