ಚಾರ್ಮಾಡಿ ಘಾಟ್ ನಲ್ಲಿ ಹಂದಿಗಳ ಕಳೇಬರ| ಮೂಗು ಮುಚ್ಚಿಕೊಂಡು ಓಡಾಡುವ ಪ್ರಯಾಣಿಕರು

ಸಮಗ್ರ ನ್ಯೂಸ್: ಚಾರ್ಮಾಡಿ ಘಾಟ್‍ನ ಮಲಯಮಾರುತ ಸಮೀಪ ಕಿಡಿಗೇಡಿಗಳು ರಸ್ತೆ ಬದಿಯಲ್ಲಿ ಹಂದಿಗಳ ಕಳೇಬರವನ್ನು ಎಸೆದು ಹೋದ ಘಟನೆ ನಡೆದಿದೆ.

Ad Widget ... ..

ನಾಲ್ಕಕ್ಕೂ ಹೆಚ್ಚು ಬಾರಿ ಗಾತ್ರ ಹಂದಿಗಳನ್ನು ಎಸೆದು ಹೋಗಿದ್ದು ರಸ್ತೆ ಬದಿಯಲ್ಲಿ ಎಸೆದಿರುವುದರಿಂದ ಈ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ.
ಸಮೀಪದಲ್ಲೆ ತೊರೆಯೊಂದು ಹರಿಯುತ್ತಿದ್ದು ಹಂದಿಯ ಕಳೇಬರ ಕೊಳೆತು ತೊರೆಯನ್ನು ಸೇರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

Ad Widget

ಮಂಗಳೂರು ಕಡೆಗೆ ಹಂದಿಗಳನ್ನು ಸಾಗಾಟ ಮಾಡುವ ವಾಹನ ಚಾಲಕರು ಸತ್ತ ಹಂದಿಗಳನ್ನು ಹೀಗೆ ಎಸೆದು ಹೋಗಿರುವ ಸಾಧ್ಯತೆ ಇದ್ದು ಹೀಗೆ ಎಸೆದು ಹೋಗಿರುವವರ ವಿರುದ್ದ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Comment

Your email address will not be published. Required fields are marked *