ಬಂಟ್ವಾಳ: ಮಗಳನ್ನೇ ಅತ್ಯಾಚಾರ ನಡೆಸಿ ಗರ್ಭವತಿ ಮಾಡಿದ ಮಲತಂದೆ

ಸಮಗ್ರ ನ್ಯೂಸ್: ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ನಡೆಸಿ ಗರ್ಭವತಿ ಮಾಡಿದ ಮಲತಂದೆ ಜೈಲು ಪಾಲಾದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ತುಂಬೆ ಎಂಬಲ್ಲಿ ನಡೆದಿದೆ.

Ad Widget ... ..

ತುಂಬೆ ರಾಮನಿವಾಸ ನಿವಾಸಿ ವೆಂಕಟೇಶ ಕಾರಂತ ಆರೋಪಿ. ವೆಂಕಟೇಶ ಕಾರಂತ ಅವರು ತುಂಬೆ ಪುರೋಹಿತ ಕೆಲಸ ಮಾಡುತ್ತಿದ್ದು, ಮಗಳ ಮೇಲೆಯೇ ಕಳೆದ 4 ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಾಲಕಿಗೆ ವೆಂಕಟೇಶ ಕಾರಂತ ಅವರು ಮಲತಂದೆ ಸಂಬಂಧಿ ಎಂದು ತಿಳಿದುಬಂದಿದೆ.

Ad Widget

ಬಾಲಕಿಯ ತಂದೆ ಅಪಘಾತ ದಲ್ಲಿ ಮರಣ ಹೊಂದಿದ ನಂತರ ಬಾಲಕಿಯ ತಾಯಿ ಎರಡನೇ ಮದುವೆಯಾಗಿದ್ದು, ಬಾಲಕಿ ಇವರ ಜೊತೆಯಲ್ಲಿ ವಾಸವಾಗಿದ್ದಳು. ಅಪ್ರಾಪ್ತ ಬಾಲಕಿಯನ್ನು 4 ತಿಂಗಳ ಗರ್ಭವತಿ ಮಾಡಿದ ಆರೋಪದ ಮೇಲೆ ಬಾಲಕಿಯ ತಂದೆಯನ್ನು ಪೋಲಿಸರು ವಶಕ್ಕೆ ಪಡೆದುಕೊಂಡು ಜೈಲಿಗೆ ಕಳುಹಿಸಿದ್ದಾರೆ.

Leave a Comment

Your email address will not be published. Required fields are marked *