ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಕುದ್ಪಾಜೆ ಎಂಬಲ್ಲಿ ದಲಿತ ನಿವಾಸಿಗಳಿಗೆ ಕಾಂಗ್ರೆಸ್ ಬಿಜೆಪಿಯವರ ಜಂಗಿಕುಸ್ತಿಯಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಈ ಹಿನ್ನಲೆ ಮುಂದಿನ ದಿನಗಳಲ್ಲಿ ಬರುವ ಚುನಾವಣೆಗೆ ಮತದಾನವನ್ನು ಬಹಿಷ್ಕರಿಸಿ ಬ್ಯಾನರ್ ಅಳವಡಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕುದ್ಪಾಜೆಯ ದಲಿತ ನಿವಾಸಿಗಳು ಕುಡಿಯಲು ನೀರು ಇಲ್ಲದೆ ತುಂಬಾ ತೊಂದರೆ ಉಂಟಾಗಿದ್ದು ಈ ಕಾರಣ ಗಂಗಾಕಲ್ಯಾಣ ಯೋಜನೆ ಅಡಿಯಲ್ಲಿ ಬೋರ್ವೆಲ್ ಕೊರೆಯಲು ಗುರುತು ಮಾಡಿದ್ದರು. ಈ ನಡುವೆ ಕಾಂಗ್ರೆಸ್ ಪಕ್ಷದವರು ನಾವು ಹೇಳಿದ ಜಾಗದಲ್ಲಿ ಬೋರ್ವೆಲ್ ಕೊರೆಯಬೇಕು, ಇನ್ನೊಂದು ಕಡೆ ಬಿಜೆಪಿ ಪಕ್ಷದವರು ನಾವು ಹೇಳಿದ ಜಾಗದಲ್ಲಿ ಬೋರ್ವೆಲ್ ಕೊರೆಯಬೇಕೆಂದು ಎರಡು ಪಕ್ಷದ ನಡುವೆ ಕಲಾಪ ಉಂಟಾಗಿದ್ದು ಎರಡು ವರ್ಷದಿಂದ ಬೋರ್ವೆಲ್ ಕೊರೆಯುವುದು ನಿಂತೇ ಹೋಗಿತ್ತು.
ಇದೀಗ ಈ ವರ್ಷ ಬೋರ್ವೆಲ್ ಕೊರೆಯಲು ಬಂದಿರುವ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ಅದೇ ಕಲಾಪ ಉಂಟಾಗಿದ್ದು ಈ ಎರಡು ಪಕ್ಷದ ರಾಜಕೀಯದಿಂದ ದಲಿತ ಜನಾಂಗದವರಿಗೆ ಕುಡಿಯಲು ನೀರು ಇಲ್ಲದಂತಾಗಿದೆ. ಒಟ್ಟಿನಲ್ಲಿ ಇಬ್ಬರ ಜಗಳದಿಂದ ದಲಿತ ನಿವಾಸಿಗಳು ನೀರಿಲ್ಲದೆ ಪರದಾಡುವಂತಾಗಿದೆ.
ಇಲ್ಲಿಯ ನಿವಾಸಿಗಳು ಗುಡ್ಡ ಪ್ರದೇಶದಲ್ಲಿ ವಾಸಿಸುವುದರಿಂದ ನೀರು ಮೇಲಕ್ಕೆ ಬಾರದೇ ಎರುವ ಸಮಸ್ಯೆ ಉಂಟಾಗಬಹುದು. ಹಾಗಾಗಿ ಸರಿಯಾದ ಜಾಗದಲ್ಲಿ ಗುರುತು ಮಾಡಿ ಬೋರ್‌ವೆಲ್ ತೆಗೆಯಬೇಕಾಗಿದೆ.
ಈ ಬಗ್ಗೆ ನಗರ ಪಂಚಾಯತ್ ಗೆ ಮನವಿ ಮಾಡಿದರು ಯಾವುದೇ ಸ್ಪಂದನೆ ದೊರೆಯದ ಹಿನ್ನಲೆ ಯಾರಿಗಾಗಿ ಮತ ಚಲಾವಣೆ ಮಾಡಬೇಕು, ಗೆದ್ದು ಹೋದ ಪ್ರತಿನಿಧಿಗಳು ನಮ್ಮ ಸಮಸ್ಯೆ ಆಲಿಸಲು ಸಹ ಆಗಮಿಸುವುದಿಲ್ಲ, ಕುಡಿಯುವ ನೀರಿಗಾಗಿ ನಾವು ಪ್ರತಿದಿನ ಕಾಯಬೇಕಾಗಿದೆ. ಕೂಲಿ ಮಾಡಿ ಜೀವನ ನಡೆಸುವ ನಾವು ನೀರಿಗಾಗಿ ಕಾಯುತ್ತಾ ಕುಳಿತರೆ ಜೀವನವನ್ನು ನಡೆಸುವುದು ಹೇಗೆ? ಹಾಗಾಗಿ ಮುಂದಿನ ದಿನಗಳಲ್ಲಿ ಬರುವ ಚುಣಾವಣೆಗೆ ಈ ಭಾಗದವರು ಮತದಾನ ಮಾಡುವುದಿಲ್ಲ ಎಂದು ಮತದಾನ ಬಹಿಷ್ಕಾರ ಬ್ಯಾನರ್ ಅಲವಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ವಿಡೀಯೊ ಕ್ಲಿಪ್ ಇಲ್ಲಿದೆ.
ಈ ಬಗ್ಗೆ ಮಾಹಿತಿ ತಿಳಿದು ನ.೧೬ರಂದು ಕರ್ನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷರಾದ ಪಿ.ಸುಂದರ ಪಾಟಾಜೆ ಮತ್ತು ಉಬರಡ್ಕ ಮಿತ್ತೂರು ಗ್ರಾಮ ಘಟಕ ಅಧ್ಯಕ್ಷರು ರಮೇಶ ಕೊಡಂಕಿರಿ ಸ್ಥಳಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಕುದ್ಪಾಜೆ ದಲಿತ ನಿವಾಸಿಗಳು ನಿಮ್ಮ ಸಂಘಟನೆಯ ಹೋರಾಟದ ಮುಖಾಂತರ ನಮಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದಾರೆ.