Ad Widget .

ಭಾರತದಲ್ಲಿ ಎಲ್ಲಾ ಸ್ಮಾರ್ಟ್ ಫೋನ್‌ಗಳಿಗೂ ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್

ನವದೆಹಲಿ: ಭಾರತವು ಎಲ್ಲಾ ಸ್ಮಾರ್ಟ್ ಸಾಧನಗಳಿಗಾಗಿ ಯುಎಸ್ಬಿ ಮಾದರಿಯ ಸಿ ಚಾರ್ಜಿಂಗ್ ಪೋರ್ಟ್‌‌ಗೆ ಸ್ಥಳಾಂತರಗೊಳ್ಳಲಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

Ad Widget . Ad Widget .

ಈ ಕುರಿತು ಮಾಹಿತಿ ನೀಡಿರುವ ಅವರು, ಕೇಂದ್ರ ಸರ್ಕಾರವು ರಚಿಸಿರುವ ಅಂತರ್ ಸಚಿವಾಲಯದ ಕಾರ್ಯಪಡೆಯ ಸಭೆಯಲ್ಲಿ ಪಾಲುದಾರರು ಒಮ್ಮತಕ್ಕೆ ಬಂದ ಬಳಿಕ ಎಲ್ಲಾ ಸ್ಮಾರ್ಟ್ ಸಾಧನಗಳಿಗಾಗಿ ಯುಎಸ್ಬಿ ಮಾದರಿಯ ಸಿ ಚಾರ್ಜಿಂಗ್ ಪೋರ್ಟ್‌‌ಗೆ ಸ್ಥಳಾಂತರಗೊಳ್ಳಲಿದೆ ಎಂದು ತೀರ್ಮಾನಿಸಲಾಗಿದೆ ಎಂದರು.

Ad Widget . Ad Widget .

ಇನ್ನು ‘ಸ್ಮಾರ್ಟ್ಫೋನ್‌ಗಳು, ಟ್ಯಾಬ್‌ಗಳು ಮತ್ತು ಲ್ಯಾಪ್‌ಟಾಪಗಳಂತಹ ಎಲೆಕ್ಟ್ರಾನಿಕ್ ಸಾಧನಗಳಿಗೆ ಚಾರ್ಜಿಂಗ್ ಪೋರ್ಟ್ ಆಗಿ ಯುಎಸ್ಬಿ ಟೈಪ್ – ಸಿ ಅನ್ನು ಅಳವಡಿಸಿಕೊಳ್ಳುವ ಬಗ್ಗೆ ಸಭೆಯಲ್ಲಿ ಮಧ್ಯಸ್ಥಗಾರರ ನಡುವೆ ವ್ಯಾಪಕ ಒಮ್ಮತ ಮೂಡಿದ್ದು, ಫೀಚರ್ ಫೋನ್‌‌ಗಳಿಗಾಗಿ ವಿಭಿನ್ನ ಚಾರ್ಜಿಂಗ್ ಪೋರ್ಟ್ ಅನ್ನು ಅಳವಡಿಸಿಕೊಳ್ಳಬಹುದು ಎಂದು ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *