ಸಮಗ್ರ ನ್ಯೂಸ್: ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ಬಳಿಯ ರೆಸಾರ್ಟ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಬೇಧಿಸಿದ್ದು, ಮೂರು ಜನರನ್ನು ಬಂಧಿಸಿ ಆಂಧ್ರ ಪ್ರದೇಶ ಮೂಲದ ಆರು ಹುಡುಗಿಯರನ್ನು ರಕ್ಷಿಸಿದ್ದಾರೆ.
ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ ಆಂಧ್ರಪ್ರದೇಶದ ಎಂಟು ಯುವತಿಯರನ್ನು ರೆಸಾರ್ಟ್‌ನ ಕೊಠಡಿಯಲ್ಲಿ ಬಂಧಿಸಿಡಲಾಗಿತ್ತು.
ಹರೇಗಾಳಿ ಗ್ರಾಮದ ಗಣೇಶಗುಡಿ ರಸ್ತೆಯ ಬರ್ಚಿ ಕ್ರಾಸ್ ಬಳಿ ರೆಸಾರ್ಟ್ ಮೇಲೆ ದಾಳಿ ನಡೆಸಲಾಗಿದ್ದು, ರೆಸಾರ್ಟ್‌ನ ಮ್ಯಾನೇಜರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರೆಸಾರ್ಟ್‌ನಲ್ಲಿ ತಂಗಿದ್ದ ಗೋವಿಂದ್ ಸುಂದರ್ ರಾವ್ ದೊಡ್ಡ ಪಾರ್ಟಿ ಆಯೋಜಿಸಿದ್ದರಿಂದ ಎಂಟು ಹುಡುಗಿಯರನ್ನು ನೃತ್ಯ ಮಾಡಲು ಕಳುಹಿಸಿಕೊಡುವಂತೆ ಕೇಳಿದ್ದರು. ಆಂಧ್ರಪ್ರದೇಶದಿಂದ ಎಸ್‌ಯುವಿ ಕಾರಿನಲ್ಲಿ ಎಂಟು ಹುಡುಗಿಯರನ್ನು ಕರೆತರಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಕ್ಷಿಸಲಾದ ಹುಡುಗಿಯರಿಗೆ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ದಾಂಡೇಲಿಯಲ್ಲಿ ಪ್ರವಾಸಿ ನಿರ್ವಾಹಕರ ನಡುವಿನ ಬೆಲೆ ಸಮರ ಅಕ್ರಮ ಚಟುವಟಿಕೆಗಳಿಗೆ ಕಾರಣವಾಗುತ್ತಿದೆ ಎಂದು ದಾಂಡೇಲಿಯ ಪ್ರವಾಸೋದ್ಯಮ ತಜ್ಞರು ಆರೋಪಿಸಿದ್ದಾರೆ. ವಿಲಾಸಿ ರೆಸಾರ್ಟ್‌ಗಳನ್ನು ತೋರಿಸಿ ಪ್ರವಾಸಿಗರನ್ನು ವಂಚಿಸಿ ಬಂದ ನಂತರ ಅವರನ್ನು ಟೆಂಟ್‌ಗಳಲ್ಲಿ ಹಾಕುವ ನಿದರ್ಶನಗಳಿವೆ. ಇತ್ತೀಚೆಗೆ ರೆಸಾರ್ಟ್ ಸಿಬ್ಬಂದಿ ಕಳಪೆ ಸೌಲಭ್ಯಗಳನ್ನು ಪ್ರಶ್ನಿಸಿದ್ದ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದಾಗಿ ತಿಳಿಸಿದ್ದಾರೆ.