Ad Widget .

ವಿಕೆಟ್ ನಿಂದ ಇರಿದು ದಲಿತ ಯುವಕರ ಮೇಲೆ ಮಾರಣಾಂತಿಕ ಹಲ್ಲೆ; ಕೇಸು ದಾಖಲು

ಸಮಗ್ರ ನ್ಯೂಸ್: ಇಬ್ಬರು ದಲಿತ ಯುವಕರ ಮೇಲೆ ವಿಕೆಟ್ ನಿಂ್ ಇರಿದು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ‌‌‌ ಮೈಸೂರು ಜಿಲ್ಲೆಯ ಕೆ ಆರ್ ನಗರ ಪಟ್ಟಣದ ಗಿರಿ ಮೆಡಿಕಲ್ ಬಳಿ ನಡೆದಿದೆ.

Ad Widget . Ad Widget .

ಕೆ‌.ಆರ್ ನಗರ ಪಟ್ಟಣದ ಆದಿಶಕ್ತಿ ಬಡಾವಣೆಯ 5ನೇ ವಾರ್ಡಿನ ನಿವಾಸಿಗಳಾದ ಭರತ್ ಕುಮಾರ್ ಹಾಗೂ ರಾಜೇಶ್ ಕುಮಾರ್ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Ad Widget . Ad Widget .

ಇವರಿಬ್ಬರು ಪಟ್ಟಣದ ಖಾಸಗಿ ಕಾಲೇಜಿನ ವಿದ್ಯಾರ್ಥಿಯಾದ ವಿನೋದ್ ಹಾಗೂ ಇನ್ನಿತರ ಜೊತೆ ಮೂರು ದಿನಗಳ ಹಿಂದೆ ಜಗಳವಾಗಿ ರಾಜಿಯಾಗಿದ್ದರು. ಮಂಗಳವಾರ ರಾತ್ರಿ 7.45 ರಲ್ಲಿ ವಿನೋದ್ ಸಂಬಂದಿ ರಾಜೇಶ್ ಕುಮಾರ್ ಎಂಬಾತ ಭರತ್ ಕುಮಾರ್ ಅವರನ್ನು ಕರೆದುಕೊಂಡು ಪಟ್ಟಣದ ಗಿರಿ ಮೆಡಿಕಲ್ ಬಳಿ ಹೋಗಿದ್ದಾರೆ. ಕಂಠನಹಳ್ಳಿ ಹಾಗೂ ಆಂಜನೇಯ ಬಡಾವಣೆಯ ನಿವಾಸಿ ಸಂಜು ಮಹದೇವ ಸಂತು ಮನು ಇತರರು ಭರತ್ ಕುಮಾರ್ ಮತ್ತು ರಾಜೇಶ್ ಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ಜಾತಿ ಹಿಡಿದು ನಿಂದಿಸಿ ಇಬ್ಬರಿಗೂ ಚಾಕುವಿನಿಂದ ಇರಿದು ವಿಕೆಟ್ ನಿಂದ ಹೊಡೆದಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಗಾಯಾಳುಗಳನ್ನು ಮೈಸೂರು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದು ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

Leave a Comment

Your email address will not be published. Required fields are marked *