Ad Widget .

ಕರುನಾಡ ಜನತೆಗೆ ‘ನಮ್ಮ ಕ್ಲಿನಿಕ್’

ಸಮಗ್ರ ನ್ಯೂಸ್: ಮಗುವಿನ ಆರೈಕೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದೊರಕುವ ಎಲ್ಲ ರೀತಿಯ ಸೌಲಭ್ಯಗಳು ಸಿಗಲಿರುವ, ಅಲ್ಲದೆ ಕೇಂದ್ರ ಸರಕಾರದ ರಾಷ್ಟ್ರೀಯ ಆರೋಗ್ಯ ಮಿಷನ್‌ ನಡಿ ಸಿಗುವ ಎಲ್ಲ ಸೌಲಭ್ಯ ಲಭ್ಯವಿರುವ ಕ್ಲಿನಿಕ್ ಇದಾಗಿದೆ. ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ತಪಾಸಣೆಯನ್ನೂ ಇಲ್ಲಿ ನಡೆಸಲಾಗುತ್ತಿದೆ.

Ad Widget . Ad Widget .

ದಕ್ಷಿಣ ಕನ್ನಡ ಜಿಲ್ಲೆಯ 12 ಮತ್ತು ಉಡುಪಿ ಜಿಲ್ಲೆಯ 6 ಕಡೆ ಸಹಿತ ಕರಾವಳಿ ಭಾಗದ 18 ಕಡೆಗಳಲ್ಲಿ ಕೆಲವೇ ದಿನಗಳಲ್ಲಿ ನಮ್ಮ ಕ್ಲಿನಿಕ್ ಕಾರ್ಯಾರಂಭಗೊಳ್ಳುವ ಸಾಧ್ಯತೆಗಳಿದ್ದು ಪ್ರತಿ ಕ್ಲಿನಿಕ್‌ನಲ್ಲಿ
ವೈದ್ಯಾಧಿಕಾರಿ, ಶುಶ್ರೂಷಕಿ, ಪ್ರಯೋಗ ಶಾಲಾ ತಂತ್ರಜ್ಞರು ಹಾಗೂ ಡಿ ಗ್ರೂಪ್ ಸಿಬ್ಬಂದಿ ಸೇರಿ ಒಟ್ಟು ನಾಲ್ವರು ಕಾರ್ಯ ನಿರ್ವಹಿಸುತ್ತಾರೆ. ಉಚಿತ ಔಷಧ ಸೇವೆ ಎಲ್ಲ ಸಾರ್ವಜನಿಕರಿಗೂ ಲಭ್ಯ ಇರಲಿದ್ದು, ಮನೆ ಭೇಟಿ ಇರುವುದಿಲ್ಲ.

Ad Widget . Ad Widget .

ಈ ಕ್ಲಿನಿಕ್‌ಗಳು ಬೆಳಗ್ಗೆ 9 ರಿಂದ ಸಂಜೆ 4.30ರ ವರೆಗೆ ಕಾರ್ಯ ನಿರ್ವಹಿಸಲಿದೆ. ಸರಕಾರಿ ರಜಾ ದಿನ ಮತ್ತು ರವಿವಾರ ಕಾರ್ಯ ನಿರ್ವಹಿಸುವುದಿಲ್ಲ.

Leave a Comment

Your email address will not be published. Required fields are marked *