Ad Widget .

ಬೆಂಗಳೂರು: ಕಿಲ್ಲರ್‌ ಬಿಎಂಟಿಸಿ ಗೆ ಯೋಧ‌ ಬಲಿ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಕೋಲಾರ ಮೂಲದ ಯೋಧ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಚಿನ್ನಕೋಟೆ ಗ್ರಾಮದ ಯೋಧ ಚೇತನ್(22) ಮೃತ ದುರ್ದೈವಿ.

Ad Widget . Ad Widget .

ಇವರ ತಂದೆ ಸುರೇಶ್ ನಿವೃತ್ತ ಯೋಧರು. ತಂದೆಯಂತೇ ತಾನೂ ಕೂಡ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಬೇಕೆಂದು ಮಹತ್ತರ ಆಸೆಯೊಂದಿಗೆ ಸೇನೆಗೆ ಸೇರಿದ್ದ ಚೇತನ್​, ಚೆನ್ನೈ ರೆಜಿಮೆಂಟ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮೂರು ವರ್ಷ ಪೂರೈಸಿದ್ದ ಚೇತನ್, ರಜೆ ಮೇಲೆ ಊರಿಗೆ ಆಗಮಿಸಿದ್ದರು.

Ad Widget . Ad Widget .

ಅ.7ರಂದು ಬೆಂಗಳೂರಿನ ಕಾಮಾಕ್ಷಿಪಾಳ್ಯ ಬಳಿ ಚೇತನ್​ಗೆ ಬಿಎಂಟಿಸಿ ಬಸ್​ ಡಿಕ್ಕಿ ಹೊಡೆದಿದ್ದು. ಅಪಘಾತದಲ್ಲಿ ಗಾಯಗೊಂಡ ಚೇತನ್​ರನ್ನು ಯಲಹಂಕ ಬಳಿಯ ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು(ಗುರುವಾರ) ಮೃತಪಟ್ಟರು. ಮಗನ ಸಾವಿನ ಸುದ್ದಿ ಕೇಳಿ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ವಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

Leave a Comment

Your email address will not be published. Required fields are marked *