ಸಮಗ್ರ ನ್ಯೂಸ್: ದೆಹಲಿಯಲ್ಲಿ ಶ್ರಧ್ದಾಳನ್ನು ಅಫ್ತಾಬ್ ಬರ್ಬರವಾಗಿ ಹತ್ಯೆ ನಡೆದಿರುವ ಘಟನೆ ಮಾಸುವ ಮುನ್ನವೇ ಮಧ್ಯಪ್ರದೇಶದ ಜಬಲ್ಪುರದ ಮೂಲದ ಎಂದು ಹೇಳಲಾದ ವ್ಯಕ್ತಿಯೊಬ್ಬ ಮಹಿಳೆ ತನಗೆ ಮೋಸ ಮಾಡಿದಳು ಎಂಬ ಕಾರಣಕ್ಕೆ ಮಹಿಳೆಯೊಬ್ಬಳನ್ನು ಕತ್ತು ಸೀಳಿ ಕೊಂದಿದ್ದಾನೆ.
ಹತ್ಯೆ ನಡೆದು ಹಲವು ದಿನಗಳು ಕಳೆದಿವೆ ಎಂದು ಹೇಳಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಬಲ್‌ಪುರ ಮೂಲದ ಮೇಖ್ಲಾ ರೆಸಾರ್ಟ್‌ನಲ್ಲಿ 25 ವರ್ಷದ ಶಿಲ್ಪಾ ಝಾರಿಯಾಳನ್ನು ಕೊಂದು, ಆಕೆ ಸಾಯುವ ಮುನ್ನವೇ ರಕ್ತಸಿಕ್ತ ದೇಹದ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಆರೋಪಿ ಪೋಸ್ಟ್ ಮಾಡಿದ್ದಾನೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಆಗಿರುವ ಆಘಾತಕಾರಿ ವಿಡಿಯೋದಲ್ಲಿ ಆತ ನಂಬಿಕೆಗೆ ದ್ರೋಹ ಮಾಡಬೇಡಿ ಎಂದಿದ್ದಾನೆ. ಹಾಗೆ, ಸ್ವರ್ಗದಲ್ಲಿ ಮತ್ತೆ ಸಿಗೋಣ ಎಂದೂ ಹೇಳಿದ್ದಾನೆ. ಹಾಸಿಗೆಯಲ್ಲಿ ಮಲಗಿರುವ ರಕ್ತಸಿಕ್ತ ಮಹಿಳೆಯನ್ನು ಆತ ತೋರಿಸಿದ್ದು, ಗಂಟಲು ಸೀಳಿ ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.
ತನ್ನನ್ನು ಪಾಟ್ನಾದ ವ್ಯಾಪಾರಿ ಎಂದು ಗುರುತಿಸಿಕೊಂಡಿರುವ ಈತನನ್ನು ಅಭಿಜಿತ್ ಎಂದು ಹೇಳಲಾಗಿದ್ದು, ಆತ ಜಿತೇಂದ್ರ ಕುಮಾರ್‌ನನ್ನು ತನ್ನ ಬ್ಯುಸಿನೆಸ್ ಪಾರ್ಟ್‌ನರ್ ಎಂದು ಹೆಸರಿಸುತ್ತಾನೆ ಮತ್ತು ಕೊಲೆಯಾದ ಮಹಿಳೆ ಆತನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ವೈರಲ್ ವಿಡಿಯೋದಲ್ಲಿ ಆತ ಆರೋಪಿಸಿದ್ದಾನೆ. ಮಹಿಳೆಯ ಗಂಟಲು ಸೀಳಿದ ಸ್ವಲ್ಪ ಸಮಯದಲ್ಲೇ ಆತ ವಿಡಿಯೋ ಮಾಡಿದ್ದು, ಆ ವೇಳೆಗೆ ಆಕೆ ಇನ್ನೂ ಮೃತಪಟ್ಟಿರಲಿಲ್ಲ ಎಂದು ಹೇಳಲಾಗಿದೆ.
ಜಿತೇಂದ್ರ ಅವರಿಂದ ಸುಮಾರು ₹ 12 ಲಕ್ಷ ಸಾಲ ಪಡೆದು ಜಬಲ್‌ಪುರಕ್ಕೆ ಮಹಿಳೆ ಪರಾರಿಯಾಗಿದ್ದಾಳೆ ಎಂದು ಅಭಿಜಿತ್ ಹೇಳಿಕೊಂಡಿದ್ದಾನೆ. ಹಾಗೂ, ಜಿತೇಂದ್ರ ಕುಮಾರ್
ಸೂಚನೆ ಮೇರೆಗೆ ಹತ್ಯೆ ಮಾಡಿದ್ದೇನೆ ಎಂದೂ ಆತ ಹೇಳಿದ್ದಾನೆ. ಜಿತೇಂದ್ರ ಅವರ ಸಹಾಯಕ ಸುಮಿತ್ ಪಟೇಲ್ ಎಂಬಾತನ ಹೆಸರನ್ನೂ ಸಹ ಆತ ವಿಡಿಯೋದಲ್ಲಿ ಹೇಳಿದ್ದಾನೆ.
ಜಿತೇಂದ್ರ ಮತ್ತು ಸುಮಿತ್ ಇಬ್ಬರನ್ನೂ ಬಿಹಾರದಿಂದ ಬಂಧಿಸಲಾಗಿದ್ದು, ಸದ್ಯ ಜಬಲ್‌ಪುರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಾಗೂ, ಈ ಸಂಬಂಧ ವಿಶೇಷ ಪೊಲೀಸ್ ವರಿಷ್ಠಾಧಿಕಾರಿ ಪ್ರಿಯಾಂಕಾ ಶುಕ್ಲಾ ಮಾತನಾಡಿದ್ದು, ಅಭಿಜಿತ್ ಪಾಟ್ನಾದಲ್ಲಿರುವ ಜಿತೇಂದ್ರ ಅವರ ಮನೆಯಲ್ಲಿ ಒಂದು ತಿಂಗಳ ಕಾಲ ತಂಗಿದ್ದನು
ಬಿಹಾರ ಅಲ್ಲದೆ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‌ನ ವಿವಿಧ ಭಾಗಗಳಿಗೆ ಅಭಿಜಿತ್‌ನನ್ನು ಪತ್ತೆ ಹಚ್ಚಲು ಪೊಲೀಸ್ ತಂಡಗಳನ್ನು ಕಳುಹಿಸಲಾಗಿದೆ ಎಂದೂ ಅವರು ಹೇಳಿದರು.
ಸಂತ್ರಸ್ಥೆಯ ಇನ್ಸ್ಟಾಗ್ರಾಮ್ ಅಕೌಂಟ್ ಮೂಲಕ ಈ ವಿಡಿಯೋ ಮಾಡಲಾಗಿದೆ. ಹಾಗೂ, ಆರೋಪಿ ಪಾಟ್ನಾದವನು ಅಲ್ಲ, ಗುಜರಾತ್ ಮೂಲದವನು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.