Ad Widget .

ವಂದೇ ಭಾರತ್ ನಲ್ಲಿ ದೂರ ಪ್ರಯಾಣಕ್ಕೆ ಕಡಿಮೆ ದರ! ಚೆನ್ನೈ- ಬೆಂಗಳೂರಿಗಿಂತ ಮೈಸೂರು- ಬೆಂಗಳೂರು ದರವೇ ತುಟ್ಟಿ

ಸಮಗ್ರ ನ್ಯೂಸ್: ಚೆನ್ನೈ- ಬೆಂಗಳೂರು – ಮೈಸೂರು ನಡುವೆ ಸಂಚರಿಸುವ ದಕ್ಷಿಣ ಭಾರತದ ಮೊದಲ ‘ವಂದೇ ಭಾರತ್‌’ ಎಕ್ಸ್‌ಪ್ರೆಸ್‌ ರೈಲಿಗೆ ಪ್ರಧಾನಿ ಮೋದಿ ಅವರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ರೈಲ್ವೆ ನಿಲ್ದಾಣದಲ್ಲಿ ಕಳೆದ ಶುಕ್ರವಾರ ಹಸಿರು ನಿಶಾನೆ ತೋರಿದ್ದಾರೆ.

Ad Widget . Ad Widget .

ಈ ರೈಲಿನ ದರ ಈಗಿರುವ ಶತಾಬ್ದಿ ರೈಲಿಗಿಂತ ಭಿನ್ನವಾಗಿದೆ. ಮೈಸೂರು-ಬೆಂಗಳೂರು ಟಿಕೆಟ್‌ಗೆ ಶತಾಬ್ದಿ ರೈಲಿಗಿಂತ ಹೆಚ್ಚಿನ ದರ ನಿಗದಿ ಮಾಡಲಾಗಿದ್ದರೆ, ಬೆಂಗಳೂರು ಚೆನ್ನೈ ಪ್ರಯಾಣಿಕರಿಗೆ ಮಾತ್ರ ಈಗಿರುವ ದರಕ್ಕಿಂತ ಕಡಿಮೆ ದರ ವಿಧಿಸಲಾಗಿದೆ.

Ad Widget . Ad Widget .

ಮೈಸೂರು- ಬೆಂಗಳೂರು ಟಿಕೆಟ್‌ ದರ ದುಪ್ಪಟ್ಟಿಗಿಂತಲೂ ಹೆಚ್ಚು ಏರಿಕೆ!

ಶತಾಬ್ದಿಯಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಚೇರ್‌ ಕಾರ್‌ ಸೀಟಿಗೆ 315 ರೂ. ದರವಿದ್ದರೆ, ವಂದೇ ಭಾರತ್‌ನಲ್ಲಿ ಟಿಕೆಟ್‌ ಬೆಲೆಯನ್ನು ಏಕಾಏಕಿ 720 ರೂ.ಗೆ ಏರಿಕೆ ಮಾಡಲಾಗಿದೆ. ಈ ಮೂಲಕ ಎರಡೂವರೆ ಪಟ್ಟು (405 ರೂ.) ಹೆಚ್ಚಳ ಮಾಡಲಾಗಿದೆ. ಎಕ್ಸಿಕ್ಯೂಟಿವ್‌ಗೆ 925 ರೂ. ಇರುವ ದರವನ್ನು 1,215 ರೂ.ಗೆ ಹೆಚ್ಚಿಸಲಾಗಿದ್ದು 290 ರೂ. ಏರಿಕೆ ಮಾಡಲಾಗಿದೆ.

ಇದೇ ರೀತಿ ಬೆಂಗಳೂರಿನಿಂದ ಮೈಸೂರಿಗೆ ಚೇರ್‌ ಕಾರ್‌ಗೆ ಶತಾಬ್ದಿಯಲ್ಲಿ 315 ರೂ. ದರವಿದ್ದರೆ, ವಂದೇ ಭಾರತ್‌ನಲ್ಲಿ 200 ರೂ. ಹೆಚ್ಚಿನ ದರವಿದ್ದು 515 ರೂ. ಇದೆ. ವಿಚಿತ್ರವೆಂದರೆ ಬೆಂಗಳೂರಿನಿಂದ ಮೈಸೂರಿಗೆ ಚೇರ್‌ ಕಾರ್‌ನಲ್ಲಿ ತೆರಳಲು 515 ರೂ. ದರವಿದ್ದರೆ, ವಾಪಸ್‌ ಬರಲು ಟಿಕೆಟ್‌ ಬೆಲೆ 720 ರೂ. ಇದೆ.

ಇದೇ ವೇಳೆ ಬೆಂಗಳೂರಿನಿಂದ ಚೆನ್ನೈ ಪ್ರಯಾಣಕ್ಕೆ ಟಿಕೆಟ್‌ ದರವನ್ನು ಇಳಿಕೆ ಮಾಡಲಾಗಿದೆ. ಕರ್ನಾಟಕ ರಾಜಧಾನಿಯಿಂದ ತಮಿಳುನಾಡು ರಾಜಧಾನಿಗೆ ಚೇರ್‌ ಕಾರ್‌ ಸೀಟಿಗೆ ಶತಾಬ್ದಿಯಲ್ಲಿ 1,130 ರೂ. ದರವಿತ್ತು. ಇದನ್ನೀಗ ವಂದೇ ಭಾರತ್‌ನಲ್ಲಿ 190 ರೂ. ಇಳಿಕೆ ಮಾಡಿ 940 ರೂ.ಗೆ ಇಳಿಸಲಾಗಿದೆ. ಇನ್ನು ಎಕ್ಸಿಕ್ಯೂಟಿವ್‌ ಸೀಟಿನ ದರವನ್ನು 1,975 ರೂ.ನಿಂದ 1835 ರೂ.ಗೆ ಇಳಿಕೆ ಮಾಡಲಾಗಿದ್ದು 140 ರೂ. ಕಡಿಮೆ ಮಾಡಲಾಗಿದೆ.

ಇದು ದೇಶದ ಐದನೇ ವಂದೇ ಭಾರತ್‌ ರೈಲಾಗಿದ್ದು, ಚೆನ್ನೈ-ಬೆಂಗಳೂರು – ಮೈಸೂರು ನಡುವಣ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.

‘ವಂದೇ ಭಾರತ್‌’ ವಿಶೇಷಗಳು
ಸೆಮಿ ಹೈಸ್ಪೀಡ್‌ ರೈಲುಗಳ ಹೊಸ ಅವತಾರದಲ್ಲಿ ಹಲವಾರು ಹೊಸ ಫೀಚರ್‌ಗಳಿವೆ. ಮೊದಲ ತಲೆಮಾರಿನ ವಂದೇ ಭಾರತ್‌ ರೈಲಿನ ವೇಗ ಗಂಟೆಗೆ 160 ಕಿ.ಮೀ. ಇದ್ದು, 54.6 ಸೆಕೆಂಡುಗಳಲ್ಲಿ 0-100 ಕಿ.ಮೀ. ವೇಗ ಪಡೆಯುತ್ತಿತ್ತು. ಆದರೆ, 3ನೇ ವಂದೇ ಭಾರತ್‌ ರೈಲಿನ ವೇಗ ಗಂಟೆಗೆ 180 ಕಿ.ಮೀ. ಇದ್ದು, 100 ಕಿ.ಮೀ. ವೇಗ ಪಡೆಯಲು ಕೇವಲ 52 ಸೆಕೆಂಡು ಸಾಕು.

  • ಉತ್ತಮ ಸೌಕರ್ಯದೊಂದಿಗೆ 2ನೇ ಪೀಳಿಗೆಯ ರೈಲು, ಗರಿಷ್ಠ ವೇಗ ಗಂಟೆಗೆ 160 ಕಿ.ಮೀ.
  • ಮೈಸೂರು – ಚೆನ್ನೈ ಪ್ರಯಾಣದ ಸಮಯ 8.30 ಗಂಟೆಯಿಂದ 6.30 ಗಂಟೆಗೆ ಇಳಿಕೆ
  • ವಿಶೇಷ ಚೇತನರಿಗೆ ಪ್ರತ್ಯೇಕ ಶೌಚಾಲಯ
  • ರೈಲುಗಳ ಡಿಕ್ಕಿ ತಪ್ಪಿಸಲು ಕವಚ ಅಳವಡಿಕೆ
  • 360 ಡಿಗ್ರಿ ತಿರುಗುವ ಆಸನಗಳು ಮತ್ತು ಇನ್ಫೋಟೈನ್ಮೆಂಟ್‌ ಸಿಸ್ಟಮ್‌
    3ನೇ ವಂದೇ ಭಾರತ್‌ ವೈಶಿಷ್ಟ್ಯಗಳೇನು?
  • ಹೊಸ ವಂದೇ ಭಾರತ್‌ ರೈಲುಗಳು ಸ್ವಯಂಚಾಲಿತ ಬಾಗಿಲು ಒಳಗೊಂಡಿದ್ದು, ಚಲಿಸುವಾಗ ಹತ್ತಲು ಅಥವಾ ಇಳಿಯಲು ಅವಕಾಶವಿಲ್ಲ
  • ಜಿಪಿಎಸ್‌ ಆಧಾರಿತ ಆಡಿಯೊ- ದೃಶ್ಯ, ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಮನರಂಜನೆಗಾಗಿ ಆನ್‌ಬೋರ್ಡ್‌ ಹಾಟ್‌ಸ್ಪಾಟ್‌ ವೈ-ಫೈ ಹೊಂದಿವೆ.
    -ಪ್ರತಿ ಕೋಚ್‌ನಲ್ಲಿ ಪ್ಯಾಂಟ್ರಿ ಇರುತ್ತದೆ, ಅಲ್ಲಿ ಬಿಸಿ ಊಟ ಮತ್ತು ತಂಪು ಪಾನೀಯಗಳನ್ನು ನೀಡಬಹುದು.
    ವಂದೇ ಭಾರತ್‌ ರೈಲು ವೇಳಾಪಟ್ಟಿ
    *ಚೆನ್ನೈ ಬೆಳಗ್ಗೆ 5:50 (ಹೊರಡುವ ವೇಳೆ)- ಬೆಂಗಳೂರು 10:20- ಮೈಸೂರು ಮಧ್ಯಾಹ್ನ 12:20
  • ಮೈಸೂರು ಮಧ್ಯಾಹ್ನ 1.05 (ಹೊರಡುವ ವೇಳೆ) ಬೆಂಗಳೂರು 2.55-ಚೆನ್ನೈ ಸಂಜೆ 7:30
  • ಬುಧವಾರ ಸೇವೆ ಇರುವುದಿಲ್ಲ

Leave a Comment

Your email address will not be published. Required fields are marked *