Ad Widget .

ನಿತ್ಯಾನಂದನ ಕೈಲಾಸ ಶಾಖೆಗಳಲ್ಲಿ ವಿವಿಧ ಉದ್ಯೋಗಾವಕಾಶ| ಪೋಸ್ಟರ್ ವೈರಲ್ ಆಗ್ತಿದ್ದಂತೆ ತನಿಖೆ ಆರಂಭಿಸಿದ ಪೊಲೀಸರು

ಸಮಗ್ರ ನ್ಯೂಸ್: ಭಾರತದ ವಿವಿಧ ಕೈಲಾಸ ಶಾಖೆಗಳಲ್ಲಿ ಸೂಕ್ತ ಸಂಭಾವನೆ ಸಹಿತ ಉದ್ಯೋಗಾವಕಾಶ ನೀಡಲಾಗುವುದು ಎಂದು ಜಾಹೀರಾತು ಪ್ರಕಟಿಸಲಾಗಿದೆ. ಸ್ಟೈಫಂಡ್ ಜೊತೆಗೆ ಒಂದು ವರ್ಷದ ತರಬೇತಿಯ ನಂತರ ಕೈಲಾಸದಲ್ಲಿ ಈ ಕೆಳಗಿನ ಕ್ಷೇತ್ರಗಳಲ್ಲಿ ಉದ್ಯೋಗ ನೀಡಲಾಗುವುದು ಎಂದು ಜಾಹೀರಾತೊಂದು ಜಾಲತಾಣಗಳಲ್ಲಿ ಫೋಸ್ಟ್​ ಮಾಡಲಾಗಿದ್ದು, ವೈರಲ್​ ಆಗುತ್ತಿದೆ. ಇದೀಗ ಈ ಪೋಸ್ಟರ್ ವೈರಲ್ ಆಗ್ತಿದ್ದು ಇದರ‌ ಬೆನ್ನತ್ತಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Ad Widget . Ad Widget .

ನಿತ್ಯಾನಂದ ಹಿಂದೂ ವಿಶ್ವವಿದ್ಯಾಲಯ, ಕೈಲಾಸ ವಿದೇಶಿ ಮತ್ತು ದೇಶೀಯ ದೇವಾಲಯಗಳು, ಕೈಲಾಸ ಐಟಿ ವಿಭಾಗ, ವಿದೇಶಿ ರಾಯಭಾರ ಕಚೇರಿ, ಪ್ಲಂಬಿಂಗ್, ಎಲೆಕ್ಟ್ರಿಕಲ್ಸ್, ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಪ್ರಕಟವಾಗಿರುವ ಪೋಸ್ಟರ್​ನಲ್ಲಿ ಪ್ರಕಟಿಸಿದೆ.

Ad Widget . Ad Widget .

ಕೆಲಸಕ್ಕಾಗಿ ಸಂಪರ್ಕಿಸಲು ಅವರು ಎರಡು ಸೆಲ್ ಫೋನ್ ಸಂಖ್ಯೆಗಳನ್ನು ನೀಡಿದ್ದಾರೆ. ಇದನ್ನೇ ನಂಬಿ ಹಲವರು ಸಂಪರ್ಕಿಸಿ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ಈಗ ಚೆನ್ನೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆ ಫೋನ್ ನಂಬರ್ ಗಳನ್ನು ಪರಿಶೀಲಿಸಲು ಸಂಪರ್ಕಿಸಿದಾಗ ಎಲ್ಲ ಕ್ಷೇತ್ರಗಳಲ್ಲೂ ಉದ್ಯೋಗವಿದ್ದು ಕನಿಷ್ಠ ಸಂಬಳ ಹತ್ತು ಸಾವಿರ ರೂ. ಎಂದು ಹೇಳಲಾಗಿದೆ.

ಅಲ್ಲದೇ ಕೈಲಾಸದಲ್ಲಿರುವ ವಿವಿಧ ಶಾಖೆಗಳಲ್ಲಿ ಆಹಾರ, ವೈದ್ಯಕೀಯ ಸೌಲಭ್ಯ ಹಾಗೂ ವಸತಿಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದು ಫೋನ್​​ನಲ್ಲಿ ಮಾತನಾಡಿದವರು ಹೇಳಿದ್ದಾರೆ ಎನ್ನಲಾಗಿದೆ.

ಒಂದು ವರ್ಷದ ನಂತರ ಅವರನ್ನು ವಿದೇಶದಲ್ಲಿ ಕೆಲಸಕ್ಕೆ ಕಳುಹಿಸಲಾಗುತ್ತದೆ ಮತ್ತು ಅವರ ಕಾರ್ಯಕ್ಷಮತೆಗೆ ಅನುಗುಣವಾಗಿ ಅವರ ಸಂಬಳವನ್ನು ಹೆಚ್ಚಿಸಲಾಗುತ್ತದೆ ಎಂದು ಭರವಸೆ ನೀಡಲಾಗಿದೆ. ಕೇವಲ ಕೆಲಸ ಮಾತ್ರವಲ್ಲದೇ ಆಧ್ಯಾತ್ಮಿಕ ತರಬೇತಿಯನ್ನೂ ನೀಡಿ ನಿಜವಾದ ಶ್ರದ್ಧೆ ಇರುವವರನ್ನು ಗುರುತಿಸಿ ಮುಂದಿನ ಹಂತದಲ್ಲಿ ವೇತನ, ಬಡ್ತಿ ನೀಡಲಾಗುವುದು ಎಂದು ಫೋನ್​​ನಲ್ಲಿ ಸಂಪರ್ಕಿಸಿದವರು ಹೇಳಿದ್ದಾರೆ.

Leave a Comment

Your email address will not be published. Required fields are marked *