Ad Widget .

ಲಿವಿಂಗ್ ಟುಗೆದರ್ ನಲ್ಲಿದ್ದ ಪ್ರಿಯತಮೆಯ ಭೀಕರ ಕೊಲೆ| ‘ದೇಹ 35 ತುಂಡು’, 18 ದಿನ ಫ್ರಿಡ್ಜ್‌ನಲ್ಲಿ!

ದೆಹಲಿ: ಲಿವಿಂಗ್ ಟುಗೆದರ್ ನಲ್ಲಿ ಜೊತೆಯಾಗಿದ್ದ ಯುವತಿಯನ್ನು ಆಕೆಯ ಪ್ರಿಯತಮನೇ ಹತ್ಯೆ ಮಾಡಿ , ಶವವನ್ನು 35 ಭಾಗಗಳಾಗಿ ತುಂಡರಿಸಿ ದೆಹಲಿಯಾದ್ಯಂತ ಎಸೆದ ಭೀಕರ ಪ್ರಕರಣವೊಂದನ್ನು ದೆಹಲಿ ಪೊಲೀಸರು ಭೇದಿಸಿದ್ದು ಆರೋಪಿಯನ್ನು ಶನಿವಾರ ಬಂಧಿಸಿದ್ದಾರೆ.

Ad Widget . Ad Widget .

26 ವರ್ಷದ ಯುವತಿ ಶ್ರದ್ಧಾ, ಮುಂಬೈನ ಬಹುರಾಷ್ಟ್ರೀಯ ಕಂಪನಿಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದು ಈ ವೇಳೆ ಅಫ್ತಾಬ್ ಅಮೀನ್ ಪೂನಾವಾಲಾ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಳು. ಆದರೆ ಯುವತಿಯ ಕುಟುಂಬವು ಈ ಸಂಬಂಧವನ್ನು ಒಪ್ಪದ ಹಿನ್ನಲೆ, ಈ ಜೋಡಿ ಮುಂಬೈ ತೊರೆದು ದೆಹಲಿಗೆ ಬಂದು ಮೆಹ್ರೌಲಿಯ ಫ್ಲಾಟ್‌ನಲ್ಲಿ ಜೊತೆಯಾಗಿ ವಾಸಿಸಲು ಪ್ರಾರಂಭಿಸಿದ್ದರು.

Ad Widget . Ad Widget .

ಈ ನಡುವೆ ಶ್ರದ್ಧಾ ಆಕೆಯ ಪೋಷಕರ ಪೋನ್ ಕರೆ ಸ್ವೀಕರಿಸದಿದ್ದಾಗ, ಮಗಳನ್ನು ಹುಡುಕಿಕೊಂಡು, ನ. 8 ರಂದು ಆಕೆಯ ತಂದೆ ವಿಕಾಸ್ ಮದನ್ ಬಂದಾಗ , ಫ್ಲಾಟ್ ಗೆ ಬೀಗ ಜಡಿದಿದ್ದು, ಗಾಬರಿಗೊಂಡು ಮೆಹ್ರೌಲಿ ಪೊಲೀಸರನ್ನು ಸಂಪರ್ಕಿಸಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣದ ಬೆನ್ನು ಹತ್ತಿದ ತನಿಖಾ ತಂಡಕ್ಕೆ ಭೀಕರ ಹತ್ಯೆಯ ವಿಚಾರ ತಿಳಿದುಬಂದಿದೆ . ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನೊಂದಿಗೆ ಶ್ರದ್ಧಾ ಮದುವೆಯಾಗುವಂತೆ ಒತ್ತಡ ಹಾಕುತ್ತಿದ್ದು , ಈ ವಿಚಾರವಾಗಿ ಇಬ್ಬರಿಗೂ ಆಗಾಗ್ಗೆ ಜಗಳವಾಗುತ್ತಿತ್ತು. ಪೋಲೀಸರ ಪ್ರಕಾರ, ಮೇ 18 ರಂದು ಈ ಜೋಡಿ ಇದೇ ವಿಚಾರವಾಗಿ ಜಗಳವಾಡಿದ್ದು , ಸಿಟ್ಟಿನಲ್ಲಿ ಅಫ್ತಾಬ್ ಅಮೀನ್ ಪೂನಾವಾಲಾ ಪ್ರಿಯತಮೆ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದು, ಅವುಗಳನ್ನು ಇರಿಸಲು ಫ್ರಿಡ್ಜ್ ಖರೀದಿಸಿದ್ದಾನೆ. ಮುಂದಿನ 18 ದಿನದಲ್ಲಿ, ಪ್ರತಿ ರಾತ್ರಿ 2 ಗಂಟೆಗೆ ತನ್ನ ಮನೆಯಿಂದ ಹೊರಟು ದೆಹಲಿಯಾದ್ಯಂತ ವಿವಿಧ ಸ್ಥಳಗಳಲ್ಲಿ ಶವದ ದೇಹದ ಭಾಗಗಳನ್ನು ಎಸೆದಿದ್ದಾನೆ ಎಂದು ತನಿಖೆಯ ವೇಳೆ ಪೊಲೀಸರು ಬಹಿರಂಗಪಡಿಸಿದ್ದಾರೆ.

ಮೆಹ್ರೌಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಶ್ರದ್ಧಾ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *