Ad Widget .

ಮೋದಿ ಉದ್ಘಾಟಿಸಿದ್ದ ರೈಲುಹಳಿಯಲ್ಲಿ ಭಾರೀ ಸ್ಫೋಟ| ಸ್ವಲ್ಪದರಲ್ಲೇ‌ ತಪ್ಪಿದ ಅನಾಹುತ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿಯವರಿಂದ ಅಕ್ಟೋಬರ್‌ 31 ರಂದು ಉದ್ಘಾಟನೆಗೊಂಡ ಹೊಸ ರೈಲು ಹಳಿಯಲ್ಲಿ ಸ್ಫೋಟಗೊಂಡಿರುವ ಘಟನೆ ಉದಯಪುರ- ಅಹಮಾದಾಬಾದ್‌ ರೈಲು ಮಾರ್ಗದ ಕೆವಡಾ ಪ್ರದೇಶದಲ್ಲಿನ ಓಡಾ ಸೇತುವೆಯ ಬಳಿ ನಡೆದಿದೆ.

Ad Widget . Ad Widget .

ಕಳೆದ ತಡರಾತ್ರಿಯ ವೇಳೆಯಲ್ಲಿ ಸ್ಫೋಟದ ಸದ್ದೊಂದು ಕೇಳಿಬಂದಿತ್ತು. ಅದರ ಸದ್ದಿನಿಂದಾಗಿ ಜನರಲ್ಲಿ ಕೋಲಾಹಲ ಉಂಟಾಗಿತ್ತು. ಮಾಹಿತಿಗಳ ಪ್ರಕಾರ ಓಡಾ ಸೇತುವೆಯಿಂದ ಸ್ಫೋಟದ ಶಬ್ಧ ಕೇಳಿ ಬಂದಿದ್ದು ,ಬಳಿಕ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ನೋಡಿದಾಗ ಹೊಸ ಹಳಿ ಹಾಳಾಗಿರುವುದು ಕಂಡುಬಂದಿದೆ. ತಕ್ಷಣವೇ ಸ್ಥಳೀಯರು ರೈಲ್ವೆ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ. ಜನರು ಎಚ್ಚೆತ್ತುಕೊಂಡು ರೈಲ್ವೇ ಇಲಾಖೆಗೆ ಮಾಹಿತಿ ನೀಡಿದ್ದರಿಂದ ಮುಂದೆ ನಡೆಯುವ ಭಾರೀ ಅನಾಹುತ ತಪ್ಪಿ ಹೋಗಿದೆ.

Ad Widget . Ad Widget .

Leave a Comment

Your email address will not be published. Required fields are marked *