ಸಮಗ್ರ ನ್ಯೂಸ್: ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್ ಅವರು ದೈವ ನರ್ತಕರು ನಾಟಕ ಮಾಡುತ್ತಾರೆ ಎಂಬುದಾಗಿ ಹೇಳುವ ಮೂಲಕ, ದೈವಾರಾಧನೆ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರ ಬೆನ್ನಲ್ಲೇ ಅವರ ವಿರುದ್ಧ ದೂರು ದಾಖಲಾಗಿದೆ.
ರಾಜ್ಯ ಸರ್ಕಾರದ ವಿರುದ್ಧ ಕಾಂತಾರ ಚಿತ್ರದ ಬಳಿಕ ದೈವ ನರ್ತಕರಿಗೆ ರೂ.2,000 ಗೌರವ ಧನವನ್ನು ಘೋಷಣೆ ಮಾಡಲಾಗಿತ್ತು. ಆದ್ರೇ ಸರ್ಕಾರದ ಈ ನಡೆಯನ್ನು ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್ ಖಂಡಿಸಿದ್ದರು. ಅಲ್ಲದೇ ಇದು ಮೂಢನಂಬಿಕೆಗೆ ಇಂಬು ಕೊಡುತ್ತದೆ ಎಂಬುದಾಗಿ ಹೇಳಿದ್ದರು.
ಇದಷ್ಟೇ ಅಲ್ಲದೇ ದೈವ ನರ್ತಕರು ಮೈಮೇಲೆ ದೈವ ಬಂದಂತೆ ನಾಟಕವಾಡುತ್ತಿದ್ದಾರೆ. ದೈವ ಬಂದಾಕ್ಷಣ ಓ ಅಂತ ಕೂಗುವುದು ಮನುಷ್ಯನ ಆಕ್ರೋಶವಷ್ಟೇ. ಇದರ ಹಿಂದೆ ಯಾವುದೇ ದೈವಿಕ ಶಕ್ತಿಯಿಲ್ಲ ಎಂಬುದಾಗಿ ಹೇಳಿಕೆ ನೀಡಿದ್ದರು.
ಮಾಜಿ ಸಚಿವೆಯ ಈ ಹೇಳಿಕೆಯು ವಿವಾದಕ್ಕೆ ಕಾರಣವಾಗಿತ್ತು. ಇದರ ವಿರುದ್ಧ ಹಿಂದೂ ಜಾಗರಣಾ ವೇದಿಕೆಯ ತಾಲೂಕು ಸಂಚಾಲಕ ಉಮೇಶ್ ಪಕ್ಕಲು ಅವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ. ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್ ಅವರ ಹೇಳಿಕೆ ತುಳುನಾಡಿನ ಸಾಕಷ್ಟು ಜನರ ಮನಸ್ಸಿಗೆ ನೋವುಂಟು ಮಾಡಿದೆ ಎಂಬುದಾಗಿ ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಲಲಿತಾ ನಾಯಕ್ ವಿರುದ್ಧ ದೂರು ದಾಖಲಾಗಿದೆ.