ಕಾಪಿರೈಟ್ ವಿವಾದದ ಹಿನ್ನಲೆ |ಯುಟ್ಯೂಬ್ ನಿಂದ ಕಾಂತಾರದ ವರಾಹ ರೂಪಂ ಸಾಂಗ್ ಡಿಲಿಟ್

ಮಂಗಳೂರು: ವರಾಹ ರೂಪಂ ಹಾಡಿಮ ಕಾಪಿರೈಟ್ ವಿವಾದದ ಹಿನ್ನಲೆ ಇದೀಗ ಯೂಟ್ಯೂಬ್ ವರಾಹ ರೂಪಂ ಹಾಡನ್ನು ಹೊಂಬಾಳೆ ಫಿಲ್ಸ್ ಚಾನೆಲ್ ನಿಂದ ತೆಗೆದು ಹಾಕಿದೆ.

Ad Widget ... ..

ಭರ್ಜರಿ ಯಶಸ್ಸು ಗಳಿಸಿರುವ ಕಾಂತಾರ ಸಿನೆಮಾಗೆ ಇದೀಗ ವಿವಾದಗಳು ಅಂಟಿಕೊಳ್ಳಲಾರಂಭಿಸಿದ್ದು, ಮಾತ್ರಭೂಮಿ ಪ್ರಿಟಿಂಗ್ ಮತ್ತು ಪಬ್ಲಿಶಿಂಗ್ ಕಂಪೆನಿ ವರಾಹ ರೂಪಂ ಹಾಡಿಗೆ ಕಾಪಿರೈಟ್ ನ್ನು ಕ್ಲೈಮ್ ಮಾಡಿದ ಹಿನ್ನಲೆ ಇದೀಗ ಯೂಟ್ಯೂಬ್ ಹೊಂಬಾಳೆ ಪಿಲ್ಮ್ಸಂ ನ ಯೂಟ್ಯೂಬ್ ಚಾನೆಲ್ ನಿಂದ ಈ ಹಾಡನ್ನು ತೆಗೆದು ಹಾಕಿದೆ.

Ad Widget

ಈ ನಡುವೆ ಥೈಕುಡಂ ಬ್ರಿಡ್ಜ್ ಸಂಗೀತ ಬ್ಯಾಂಡ್‌ನ‌ ಅನುಮತಿಯಿಲ್ಲದೇ “ವರಾಹ ರೂಪಂ’ ಹಾಡನ್ನು ಪ್ರಸಾರ ಮಾಡುವಂತಿಲ್ಲ ಎಂದು “ಕಾಂತಾರ’ ಚಿತ್ರತಂಡಕ್ಕೆ ಕೇರಳದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ನಿರ್ಬಂಧ ಹೇರಿದ್ದು, ಥಿಯೇಟರ್‌ಗಳಲ್ಲಿ ಹಾಗೂ ಸ್ಟ್ರೀಮಿಂಗ್‌ ಪ್ಲಾಟ್‌ಫಾರಂಗಳಲ್ಲಿ ಈ ಹಾಡಿನ ಪ್ರಸಾರವನ್ನು ಸ್ಥಗಿತಗೊಳಿಸುವಂತೆ ಈಗಾಗಲೇ ನ್ಯಾಯಾಲಯ ಆದೇಶಿಸಿದೆ. “ಕಾಂತಾರ’ ಸಿನಿಮಾದಲ್ಲಿನ ವರಾಹ ರೂಪಂ ಹಾಡಿನ ಕೆಲವು ಭಾಗಗಳನ್ನು ನಮ್ಮ ಒರಿಜಿನಲ್‌ “ನವರಸಂ’ ಹಾಡಿನಿಂದ ನೇರವಾಗಿ ಎತ್ತಲಾಗಿದೆ ಎಂದು ಆರೋಪಿಸಿ ಥೈಕುಡಂ ಬ್ರಿಡ್ಜ್ ಸಂಗೀತ ಬ್ಯಾಂಡ್‌ ಕೇರಳದ ಕೋರ್ಟ್‌ ಮೆಟ್ಟಿಲೇರಿತ್ತು.

Leave a Comment

Your email address will not be published. Required fields are marked *