Ad Widget .

ಪುತ್ತೂರಲ್ಲಿ ಹೀಗೂ ಉಂಟು! ಪೊದೆಯೊಳಗೆ ಅಡಗಿ ಕುಳಿತ ಬಸ್ ನಿಲ್ದಾಣ

ಸಮಗ್ರ ನ್ಯೂಸ್: ಇಲ್ಲಿ ಪೊದೆಯೊಳಗೆ ಬಸ್ ತಂಗುದಾಣವೊಂದು ಅಡಗಿ‌ ಕುಳಿತಿದೆ. ಇದು ಕಂಡು ಬಂದಿರುವುದು ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪೆರಿಗೇರಿ, ಕನ್ನಾಯ ಎಂಬಲ್ಲಿ.

Ad Widget . Ad Widget .

ಹೌದು, ಇಲ್ಲಿಯ ಪ್ರಯಾಣಿಕರು ಬಸ್ ತಂಗುದಾಣ ಇದ್ದರೂ ಕೂಡ ರಸ್ತೆ ಬದಿ ನಿಲ್ಲುವಂತಾಗಿದೆ. ಇದಕ್ಕೆ ಕಾರಣ ಅಲ್ಲಿಯ ಬಸ್ ನಿಲ್ದಾಣ ಇರುವುದು ಪೊದೆಯೊಳಗೆ. ಈ ಬಗ್ಗೆ ಇಲ್ಲಿ ಯಾರು ಹೇಳೊರಿಲ್ಲ! ಕೇಳೊರಿಲ್ಲ!

Ad Widget . Ad Widget .

ಇದರಿಂದ ಪ್ರತಿದಿನ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಪ್ರಯಾಣಿಕರು ರಸ್ತೆ ಬದಿ ನಿಲ್ಲುವಂತಾಗಿದೆ. ಮಧ್ಯಾಹ್ನದ ಬಿಸಿಲಿಗೆ ಬಸ್ ಗಾಗಿ ಕಾದು ನಿಂತವರು ತಲೆ ಸುತ್ತಿ ಬಿದ್ದಿರುವ ಘಟನೆಯು ನಡೆದಿದೆ ಎಂದು ತಿಳಿದುಬಂದಿದೆ.

ಹಾಗಾಗಿ ಸ್ಥಳೀಯ ಜನಪ್ರತಿನಿಧಿ, ಸ್ಥಳೀಯ ಗ್ರಾಮ ಪಂಚಾಯತ್ ಈ ಬಗ್ಗೆ ಸ್ವಲ್ಪ ಗಮನಿಸಿ. ಮುಂದಿನ ದಿನಗಳಲ್ಲಿ ಬಿಸಿಲು ಹೆಚ್ಚು ಇರುವುದರಿಂದ ಇದನ್ನು ಸ್ವಚ್ಛ ಗೊಳಿಸಿ ಪ್ರಯಾಣಿಕರು ಬಸ್ ತಂಗುದಾಣದಲ್ಲಿ ನಿಲ್ಲುವಂತೆ ಅವಕಾಶ ಮಾಡಿ ಕೊಡುವುದು ಸ್ಥಳೀಯ ಆಡಳಿತದ ಜವಾಬ್ದಾರಿ.

1 thought on “ಪುತ್ತೂರಲ್ಲಿ ಹೀಗೂ ಉಂಟು! ಪೊದೆಯೊಳಗೆ ಅಡಗಿ ಕುಳಿತ ಬಸ್ ನಿಲ್ದಾಣ”

Leave a Comment

Your email address will not be published. Required fields are marked *