ಕೇರಳ: ಚಲಿಸುತ್ತಿದ್ದ ಬಸ್ಸಿನ ಮುಂಭಾಗದ ಗಾಜುಗೆ ಯುವಕನೊಬ್ಬ ಹಾರಿ ತಲೆಯಿಂದ ಗಾಜು ಒಡೆದು ಹಾಕಿರುವ ವಿಲಕ್ಷಣ ಘಟನೆ ಮಲಪ್ಪುರಂ ಜಿಲ್ಲೆಯ ಪೆರಿಂತಲ್ ಮನ್ನಾದಲ್ಲಿ ಜುಬಿಲಿ ಜಂಕ್ಷನ್‌ನಲ್ಲಿ ನಡೆದಿದೆ.
ಖಾಸಗಿ ಬಸ್ ಮಂಕಡಾ ಕಡೆಗೆ ತೆರಳುತ್ತಿತ್ತು, ಈ ವೇಳೆ ಬಸ್ ಎದುರಿಗೆ ಓಡಿ ಬಂದು, ಮೇಲಕ್ಕೆ ಜಿಗಿದು ತಲೆಯಿಂದ ಡಿಕ್ಕಿ ಹೊಡೆದು ವಿಂಡ್ಶೀಲ್ಡ್ ಗಾಜನ್ನು ಪುಡಿ ಪುಡಿ ಮಾಡಿದ್ದಾನೆ. ಬಸ್ ಗುದ್ದಿದ ರಭಸಕ್ಕೆ ಯುವಕನು ಕೂಡ ಕೊಂಚ ದೂರ ಹಾರಿ ಬಿದ್ದಿದ್ದಾನೆ. ಕೆಲ ಸೆಕೆಂಡ್ಗಳ ಕಾಲ ನೆಲದ ಮೇಲೆಯೇ ಬಿದ್ದಿದ್ದ ಯುವಕ, ಬಳಿಕ ಎದ್ದು ಬಂದು ಬಸ್ ಏರಿದ್ದಾನೆ. ಡ್ರೈವರ್ ಸೀಟ್ ಮೇಲೆ ಕುಳಿತು ತನ್ನ ಎರಡೂ ಕಾಲುಗಳನ್ನು ಸ್ಟೀರಿಂಗ್ ಮೇಲೆ ಇಟ್ಟು ಕೆಲಕಾಲ ಬಸ್ನಲ್ಲಿದ್ದವರನ್ನು ಪೀಡಿಸಿದ್ದಾರೆ.
ಯುವಕ ಮಾನಸಿಕವಾಗಿ ಅಸ್ವಸ್ಥಗೊಂಡಿರುವ ಕಾರಣ ಪೊಲೀಸರು ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತ ಬ್ರೆಜಿಲ್ ಫುಟ್ಬಾಲ್ ತಾರೆ ನೇಮಾರ್ ಅವರ ದೊಡ್ಡ ಅಭಿಮಾನಿ ಎಂದು ತಿಳಿದು ಬಂದಿದ್ದು, ಮತ್ತು ಬಸ್ ನ ಕಲರ್ ಅರ್ಜೆಂಟೀನಾ ಫುಟ್ಬಾಲ್ ತಂಡದ ಬಣ್ಣವಾಗಿದ್ದ ಕಾರಣ ಅವನು ಬಸ್ ನ ಗ್ಲಾಸಿಗೆ ‘ಹೆಡ್’ ಮಾಡಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.