ಬಸ್ಕಲ್ ಗ್ರಾ.ಪಂ ಬಸ್ ನಿಲ್ದಾಣ ಒತ್ತುವರಿ:
ಗ್ರಾ.ಪಂ ಮಾಜಿ ಅಧ್ಯಕ್ಷರಿಂದ ಆರೋಪ

ಸಮಗ್ರ ನ್ಯೂಸ್: ಮೂಡಿಗೆರೆ ತಾಲೂಕಿಿ ನಂದಿಪುರ ಗ್ರಾ.ಪಂ ವ್ಯಾಪ್ತಿಯ ಬಸ್ಕಲ್ ಗ್ರಾಮದ ಬಸ್ ನಿಲ್ದಾಣವನ್ನು ಒತ್ತುವರಿ ಮಾಡಲಾಗಿದೆ ಎಂದು ಗ್ರಾ.ಪಂ ಮಾಜಿ ಅಧ್ಯಕ್ಷರಾದ ನಾರಾಯಣ್ ಅವರು ಆರೋಪಿಸಿದ್ದಾರೆ.

Ad Widget ... ..

ಬಸ್ಕಲ್ ಗ್ರಾಮದ ಮಂಜುನಾಥ್ ಎಂಬುವವರು ಸಾರ್ವಜನಿಕರಿಗೆ ಉಪಯೋಗವಾಗಲೆಂದು ಬಸ್ ನಿಲ್ದಾಣಕ್ಕೆ ಜಾಗವನ್ನು ದಾನವಾಗಿ ನೀಡಿದ್ದರು. ಈ ಜಾಗವನ್ನು ದುರುಪಯೋಗ ಮಾಡಿಕೊಂಡು ಬಸ್ ನಿಲ್ದಾಣವನ್ನು ದುರಸ್ಥಿಗಾಗಿ ನೆಲಸಮ ಮಾಡಿದ ಸಂದರ್ಭದಲ್ಲಿ ಬಸ್ ನಿಲ್ದಾಣದ ಜಾಗವನ್ನು ಒತ್ತುವರಿ ಮಾಡಲಾಗಿದೆ‌.

Ad Widget

ನೂರಾರು ಪ್ರಯಾಣಿಕರಿಗೆ ಅನುಕೂಲವಾಗಿದ್ದ ಬಸ್ ನಿಲ್ದಾಣ್ ಜಾಗವನ್ನು ಒತ್ತುವರಿ ಮಾಡಿದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ಮತ್ತು ಬಸ್ ನಿಲ್ದಾಣ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *