Ad Widget .

ಸುಳ್ಯ: ಸೇತುವೆ, ರಸ್ತೆ ಸಂಪರ್ಕ ಸರಿ ಮಾಡುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಸಿಎಂ ಗೆ ಮನವಿ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಸೇತುವೆ ಹಾಗೂ ರಸ್ತೆ ಸಂಪರ್ಕ ಸರಿ ಮಾಡುವಂತೆ ಮುಖ್ಯಮಂತ್ರಿಯವರಿಗೆ ಹಾಗೂ ಅಧಿಕಾರಿಗಳಿಗೆ ಮನವಿ ನೀಡಲಾಯಿತು.

Ad Widget . Ad Widget .

ಉಬರಡ್ಕದ ಅಮೈ ಪಾಲಡ್ಕ ಎಂಬಲ್ಲಿ ಹೊಸ ಸೇತುವೆ, ಯಾವಟೆ ಕಟ್ಟಕೋಡಿ ಅಚ್ಚು ಪಲ್ಲ ಸಂಪರ್ಕ ರಸ್ತೆಗೆ ಕಾಂಕ್ರೀಟಿಕರಣ, ಮಂಜಿಕಾನ ಬದನೆಕಜೆ ಸಂಪರ್ಕ ರಸ್ತೆಗೆ ಕಾಂಕ್ರೀಟಿಕರಣ ಮತ್ತು ಅದೇ ರಸ್ತೆಯಲ್ಲಿ ನದಿಗೆ ಸೇತುವೆ, ಇವೆಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ಇರುವಂತಹ ಜಾಗ ಆದ ಕಾರಣ ಆದಷ್ಟು ಬೇಗ ಸೇತುವೆ ಮತ್ತು ಕಾಂಕ್ರೀಟಿಕರಣ ಮಾಡಿಕೊಡಬೇಕು.

Ad Widget . Ad Widget .

ಈ ಬಗ್ಗೆ ಕರ್ನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷರಾದ ಪಿಸುಂದರಪಾಟಾಜೆಯವರು ನ.8 ರಂದು ಮುಖ್ಯಮಂತ್ರಿಯವರಿಗೆ, ಪಂಚಾಯತ್ ರಾಜ್ ಇಲಾಖೆ ಬೆಂಗಳೂರು ಮತ್ತು ಶಾಸಕರಿಗೆ, ಜಿಲ್ಲಾಧಿಕಾರಿಯವರಿಗೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ಮತ್ತು ಸಹಾಯಕ ನಿರ್ದೇಶಕರು (ಗ್ರೇಡ್-2) ಸಮಾಜ ಕಲ್ಯಾಣ ಇಲಾಖೆ ಸುಳ್ಯ ಇವರಿಗೆ ಮನವಿ ನೀಡಲಾಯಿತು.

Leave a Comment

Your email address will not be published. Required fields are marked *