Ad Widget .

ಶಿಷ್ಯೆಯಲ್ಲಿ ವರಿಸಲು ಲಿಂಗ ಬದಲಿಸಿಕೊಂಡ ಶಿಕ್ಷಕಿ

ಸಮಗ್ರ ನ್ಯೂಸ್: ಶಿಷ್ಯೆಯನ್ನು ಪ್ರೀತಿಸಿದ್ದ ಶಿಕ್ಷಕಿ ಆಕೆಯನ್ನು ಮದುವೆಯಾಗಲು ಲಿಂಗ ಬದಲಾವಣೆ ಮಾಡಿಸಿಕೊಂಡಿದ್ದಾರೆ. ರಾಜಸ್ಥಾನ ಭರತ್‌ಪುರದಲ್ಲಿ ಈ ಘಟನೆ ನಡೆದಿದೆ.

Ad Widget . Ad Widget .

ಇಲ್ಲಿನ ಶಿಕ್ಷಕಿಯೊಬ್ಬರಿಗೆ ತನ್ನ ವಿದ್ಯಾರ್ಥಿನಿ ಮೇಲೆ ಪ್ರೀತಿ ಉಂಟಾಗಿದ್ದು, ಆಕೆಯನ್ನು ಮದುವೆಯಾಗುವ ಸಲುವಾಗಿ ಎರಡುಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಗಂಡಾಗಿ ಪರಿವರ್ತನೆಯಾಗಿದ್ದಾರೆ.

Ad Widget . Ad Widget .

ಆರವ್‌ ಕುಂತಲ್‌ ಎಂಬುವವರೇ ಲಿಂಗ ಬದಲಾವಣೆ ಮಾಡಿಕೊಂಡ ಶಿಕ್ಷಕಿ. 2019ರಲ್ಲಿ ಮೊದಲ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದ ಇವರು, ಇತ್ತೀಚೆಗೆ ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸಂಪೂರ್ಣ ಗಂಡಾಗಿ ಬದಲಾಗಿದ್ದಾರೆ. ಅನಂತರ ತನ್ನ ಶಿಷ್ಯಯನ್ನೇ ಲವ್‌ ಮಾಡಿ ಮದುವೆಯಾಗಿದ್ದಾರೆ.

ಶಿಕ್ಷಕಿ ಮೀರಾ(ಆರವ್ ಕುಂತಲ್) ಮತ್ತು ವಿದ್ಯಾರ್ಥಿನಿ ಕಲ್ಪನಾ ಎರಡು ವರ್ಷಗಳ ಕಾಲ ಆಪ್ತ ಸ್ನೇಹಿತರಾಗಿದ್ದರು. ನಂತರ 2018ರಲ್ಲಿ ಮೀರಾ, ಕಲ್ಪನಾಗೆ ಮದುವೆ ಕುರಿತು ಪ್ರಸ್ತಾಪ ಮಾಡಿದರು. ಆಗ ಕಲ್ಪನಾ ತಕ್ಷಣವೇ ಅದಕ್ಕೊಪ್ಪಿಗೆ ಸೂಚಿಸಿದರು. ಆದರೆ, ಸಮಲಿಂಗಿಗಳು ಮದುವೆಯಾಗುವುದನ್ನು ತಮ್ಮ ಕುಟುಂಬ ಮತ್ತು ಸಮಾಜ ಒಪ್ಪಲಾರದು ಎಂಬ ವಾಸ್ತವ ಅವರನ್ನು ಕಾಡತೊಡಗಿತು. ಆಗ ಮೀರಾ, ಲಿಂಗ ಪರಿವರ್ತನೆ ಇದಕ್ಕೆ ಸೂಕ್ತ ಹಾದಿ ಎಂದು ತೀರ್ಮಾನಿಸಿದರು. ಮೀರಾ ಗಂಡಾಗಿ ಪರಿವರ್ತನೆಗೊಂಡು ಆರವ್ ಆದರು. ನಂತರ ಪರಸ್ಪರ ಕುಟುಂಬದವರು ಇವರಿಬ್ಬರ ಮದುವೆಗೆ ಒಪ್ಪಿಗೆ ಸೂಚಿಸಿತು.

Leave a Comment

Your email address will not be published. Required fields are marked *