ಸಮಗ್ರ ನ್ಯೂಸ್: ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ರಿಷಬ್ ಬಾಲಿವುಡ್ ಬಗ್ಗೆ ಮಾತನಾಡಿದ್ದು ನೇರವಾಗಿ ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡುವುದಕ್ಕೆ ಇಷ್ಟವಿಲ್ಲ ಎಂದು ಹೇಳಿಕೊಂಡಿದ್ದಾರೆ. ‘ನಾನು ಕನ್ನಡ ಸಿನಿಮಾಗಳನ್ನು ಮಾಡಬೇಕು. ನಾನು ಹೆಮ್ಮೆಯ ಕನ್ನಡಿಗ. ಕನ್ನಡ ಚಿತ್ರರಂಗ ಮತ್ತು ಕನ್ನಡ ಜನತೆಯಿಂದ ನಾನು ಇಂದು ಈ ಮಟ್ಟದಲ್ಲಿ ಹೆಸರು ಮಾಡಿರುವುದು. ಒಂದು ಸಿನಿಮಾ ಹಿಟ್ ಆಗಿದೆ ಎಂದ ಮಾತ್ರಕ್ಕೆ ನನ್ನ ಸ್ನೇಹಿತರು ಮತ್ತು ಕುಟುಂಬಸ್ಥರು ಬದಲಾಗುವುದಿಲ್ಲ. ನಮ್ಮ ಕೋರ್ ಕನ್ನಡ ಸಿನಿಮಾರಂಗದಲ್ಲಿ ಉಳಿಯುತ್ತದೆ’ ಎಂದು ಇಂಡಿಯಾ ಎಕ್ಸಪ್ರೆಸ್ನಲ್ಲಿ ರಿಷಬ್ ಮಾತನಾಡಿದ್ದಾರೆ.
‘ಕಾಂತಾರ’ ಸಿನಿಮಾ ವಿಶ್ವಾದ್ಯಂತ ಹೆಸರು ಮಾಡುತ್ತಿದೆ ಗಳಿಕೆ ಮಾಡುತ್ತಿದೆ ಅನ್ನೋ ವಿಚಾರವನ್ನು ಈಗಲೂ ರಿಷಬ್ ಕನಸಿನಂತೆ ಕಾಣುತ್ತಿದ್ದಾರೆ. ಅಭಿಮಾನಿಗಳು ಕೊಡುತ್ತಿರುವ ಪ್ರೀತಿಯಲ್ಲಿ ಮುಳುಗಿದ್ದಾರೆ.
‘ಹೆಚ್ಚು ಪ್ರಾದೇಶಿಕತೆ ಹೆಚ್ಚು ಸಾರ್ವತ್ರಿಕವಾಗಿದೆ ಎಂದು ನಾನು ನಂಬುತ್ತೇನೆ. ಜನರಿಗೆ ನನ್ನ ಕಂಟೆಂಟ್ ಇಷ್ಟವಾದರೆ ಅವರಿಗಾಗಿ ಹಿಂದಿಯಲ್ಲಿ ರಿಲೀಸ್ ಮಾಡುವೆ ಇಲ್ಲದಿದ್ದರೆ ಕರ್ನಾಟಕದಲ್ಲಿ ಮಾತ್ರ ರಿಲೀಸ್ ಮಾಡುವೆ. ಕಾಂತಾರ ಸಿನಿಮಾ ರಿಲೀಸ್ ಮಾಡುವಾಗ ಪ್ಯಾನ್ ಇಂಡಿಯಾ ಬಗ್ಗೆ ಯೋಚನೆ ಮಾಡಿರಲಿಲ್ಲ. ಸಿನಿಮಾ ಅದಾಗೆ ಭಾರತದಲ್ಲಿ ಪ್ರಚಾರ ಪಡೆದುಕೊಂಡಿತ್ತು ಈಗಲ್ಲೂ ಇದೆಲ್ಲಾ ಹೇಗೆ ಆಯ್ತು ಅನ್ನೋದು ನನಗೆ ಗೊತ್ತಿಲ್ಲ. ಈಗ ಅದು ಪ್ಯಾನ್-ಇಂಡಿಯಾ ಹಿಟ್ ಆಗಿರುವುದರಿಂದ, ನಾನು ಚಲನಚಿತ್ರಗಳನ್ನು ನಿರ್ದಿಷ್ಟ ರೀತಿಯಲ್ಲಿ ಮಾಡಬೇಕು ಎಂದು ನಾನು ಭಾವಿಸುವುದಿಲ್ಲ. ನನ್ನ ಜಾಗದ ಬಗ್ಗೆ ಹೆಚ್ಚಿನ ಕಥೆ ಮಾಡುವೆ. ನನ್ನ ಶ್ರಮ ಹೆಚ್ಚಿಗೆ ಇರಲಿದೆ’ ಎಂದು ರಿಷಬ್ ಹೇಳಿದ್ದಾರೆ.