Ad Widget .

ಮುರುಘಾ ಶ್ರೀಯಿಂದ 10 ಕ್ಕೂ ಹೆಚ್ಚು ಬಾಲಕಿಯರ ಅತ್ಯಾಚಾರ; ಒಂದು ಕೊಲೆ!! ಅಬ್ಬಬ್ಬಾ… ಚಾರ್ಜ್ ಶೀಟ್ ನಲ್ಲಿನ ಆರೋಪಗಳೇನು?

ಸಮಗ್ರ ನ್ಯೂಸ್: ಮುರುಘಾ ಶ್ರೀ ವಿರುದ್ಧ ಪೊಲೀಸರು 694 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದು ಅದರಲ್ಲಿ ಸಾಕಷ್ಟು ಶಾಕಿಂಗ್‌ ಆರೋಪಗಳನ್ನು ಮಾಡಲಾಗಿದೆ. ಉನ್ನತ ಮೂಲಗಳ ಪ್ರಕಾರ ಮುರುಘಾ ಶ್ರೀ ಪ್ರತಿ ಭಾನುವಾರ ಮಕ್ಕಳನ್ನು ಕೋಣೆಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಆರೋಪಿಸಲಾಗಿದೆ.

Ad Widget . Ad Widget .

ಜತೆಗೆ ಪ್ರಕರಣದ ಎರಡನೇ ಆರೋಪಿ ವಾರ್ಡನ್‌ ರಶ್ಮಿ ಮಕ್ಕಳನ್ನು ಕೋಣೆಗೆ ಕರೆದುಕೊಂಡು ಬರುತ್ತಿದ್ದಳು, ಒಪ್ಪದವರಿಗೆ ಬೆದರಿಕೆ ಹಾಕಲಾಗುತ್ತಿತ್ತು ಎಂದೂ ಆರೋಪಿಸಲಾಗಿದೆ. ರಶ್ಮಿ ಕೈಗೆ ಮಕ್ಕಳ ಹೆಸರನ್ನು ಬರೆದು ಮುರುಘಾ ಶ್ರೀ ಕೊಡುತ್ತಿದ್ದರು, ನಂತರ ಸ್ವಾಮಿ ಸೂಚಿಸಿದ ಮಕ್ಕಳನ್ನು ರಶ್ಮಿ ಕರೆದುಕೊಂಡು ಬರುತ್ತಿದ್ದಳು. ಮನೆಯವರಿಗೆ ಆರ್ಥಿಕ ಸಹಾಯ ಮಾಡುವ ಭರವಸೆ ನೀಡಿ ಒಪ್ಪಿಸುತ್ತಿದ್ದರು, ಒಪ್ಪದಿದ್ದವರಿಗೆ ಬೆದರಿಕೆ ಹಾಕಲಾಗುತ್ತಿತ್ತು ಎಂದು ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಆರೋಪಿಸಿದ್ದಾರೆ.

Ad Widget . Ad Widget .

ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿರುವ ಅಂಶಗಳೇನು?:

  1. ಮುರುಘಾ ಶ್ರೀಗಳು ತನ್ನ ಬಳಿಗೆ ಇಬ್ಬರು ಹುಡುಗಿಯರನ್ನು ಕಳುಹಿಸುವಂತೆ ಚೀಟಿ ಕಳುಹಿಸುತ್ತಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಆರೋಪಿಸಲಾಗಿದೆ. ಶ್ರೀ ಹೇಳಿದ ಇಬ್ಬರು ಹುಡುಗಿಯರನ್ನು ಶ್ರೀಗಳ ಬಳಿ ವಾರ್ಡ್‌ನ್ ರಶ್ಮಿ ಕಳುಹಿಸುತ್ತಿದ್ದಳು.
  2. ಟ್ಯೂಷನ್ ಮಾಡುವುದಾಗಿ ಭಾನುವಾರ ಸಂಜೆ ವಿದ್ಯಾರ್ಥಿನಿಯರನ್ನು ಮುರುಘಾ ಶರಣರು ಕರೆಸಿಕೊಳ್ಳುತ್ತಿದ್ದರು. ಟ್ಯೂಷನ್ ಮುಗಿದ ನಂತರ ಇಬ್ಬರು ಹುಡುಗಿಯರನ್ನು ಅಲ್ಲಿಯೇ ಉಳಿಸಿಕೊಳ್ಳುತ್ತಿದ್ದರು. ಕಸ ಹೊಡೆಯಬೇಕು ಎಂದು ವಿದ್ಯಾರ್ಥಿನಿಯರನ್ನು ಶ್ರೀಗಳು ಇರಿಸಿಕೊಳ್ಳುತ್ತಿದ್ದರು.
  3. ವಿದ್ಯಾರ್ಥಿನಿಯರನ್ನು ಪಕ್ಕದಲ್ಲಿ ಕೂರಿಸಿಕೊಂಡು ಹಣ್ಣು, ಡ್ರೈಫೂಟ್ಸ್ ಕೊಡುತ್ತಿದ್ದ ಮುರುಘಾ ಶ್ರೀ. ಈ ವೇಳೆ ವಿದ್ಯಾರ್ಥಿನಿಯರ ಖಾಸಗಿ ಅಂಗಗಳನ್ನು ಮುಟ್ಟುತ್ತಿದ್ದರು. ತಾನು ಬೆತ್ತಲಾಗಿ ವಿದ್ಯಾರ್ಥಿನಿಯರ ಸೊಂಟವನ್ನು ಮುಟ್ಟುತ್ತಿದ್ದರು. ನಮ್ಮ ಬಟ್ಟೆ ಬಿಚ್ಚಿ ಅತ್ಯಾಚಾರ ಮಾಡಿದ ಬಗ್ಗೆ ಪೊಲೀಸರಿಗೆ ಸಂತ್ರಸ್ತ ವಿದ್ಯಾರ್ಥಿನಿಯರು ನೀಡಿದ ಹೇಳಿಕೆಯನ್ನು ಚಾರ್ಜ್‌ಶೀಟ್‌ನಲ್ಲಿ ಹಾಕಲಾಗಿದೆ.
  4. ಬಾಲಕಿಯರು ಶ್ರೀಗಳ ಬಳಿ ಹೋಗಲು ಒಪ್ಪದಿದ್ದಾಗ ಅವಾಚ್ಯವಾಗಿ ನಿಂದನೆ ಮಾಡಲಾಗುತ್ತಿತ್ತು. ಮನೆಯವರಿಗೆ ಸಹಾಯ ಮಾಡುವುದಾಗಿ ಹೇಳಿ ಅತ್ಯಾಚಾರ ಬಗ್ಗೆ ಬಾಯಿಬಿಡದಂತೆ ಬೆದರಿಕೆ ಹಾಕಲಾಗುತ್ತಿತ್ತು.
  5. ವಿದ್ಯಾರ್ಥಿನಿಯರನ್ನು ಕೂರಿಸಿಕೊಂಡು ಮಧ್ಯಪಾನ ಮಾಡಿಸುತ್ತಿದ್ದ ಮುರುಘಾ ಶ್ರೀಗಳು. ಶ್ರೀಗಳಿಗೆ ಗಂಗಾಧರ್, ಬಸವಾದಿತ್ಯ ಸ್ವಾಮಿ, ರಶ್ಮಿ ಪರಮಶಿವಯ್ಯನವರು ಬೆಂಬಲ ನೀಡುತ್ತಿದ್ದರು.
  6. ಬೆಂಗಳೂರಿನ ವಿದ್ಯಾರ್ಥಿನಿಯೊಬ್ಬಳನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸ್ವಾಮೀಜಿ ಕಡೆಯವರು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆಂದು ಹಾಸ್ಟೆಲ್​ನಲ್ಲಿ ಚರ್ಚೆಯಾಗುತ್ತಿದ್ದ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
  7. ವಾರ್ಡನ್​ ರಶ್ಮಿ ಜೊತೆ ಜಗಳವಾಡಿ ಬೆಂಗಳೂರಿನಲ್ಲಿ ದೂರು ನೀಡಿದ್ದಾಗಿ ಯುವತಿ ಹೇಳಿಕೆ ನೀಡಿದ್ದಾರೆ. ಸಂತ್ರಸ್ತರೆಲ್ಲರ ಹೇಳಿಕೆಗಳನ್ನು ಚಾರ್ಜ್‌ಶೀಟ್‌ನಲ್ಲಿ ಹಾಕಲಾಗಿದೆ.
  8. ಪ್ರತಿದಿನ ಮದ್ಯಪಾನ ಮಾಡಿ ಬಾಲಕಿಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು ಎಂದೂ ಆರೋಪಿಸಲಾಗಿದೆ.

ದೋಷಾರೋಪ ಪಟ್ಟಿ ಸಲ್ಲಿಕೆಯಾದ ಬಳಿಕವೂ ತನಿಖೆ ಮುಂದುವರೆಯಲಿದ್ದು ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿ ಇನ್ನಷ್ಟು ಅಂಶಗಳು ಬೆಳಕಿಗೆ ಬರುವ ಸಾಧ್ಯತೆಯಿದೆ. ಮುರುಘಾ ಶರಣರ ವಿರುದ್ಧ ಒಂದಾದ ಮೇಲೊಂದು ಆರೋಪಗಳು ಕೇಳಿ ಬರುತ್ತಿದ್ದು ಎಲ್ಲಾ ವಿಚಾರಗಳನ್ನು ಸಮಗ್ರವಾಗಿ ತನಿಖೆ ಮಾಡಲು ಪೊಲಿಸ್‌ ತಂಡ ಮುಂದಾಗಿದೆ. ಪ್ರಕರಣವನ್ನು ಬೆಳಕಿಗೆ ತಂದು ಸಂತ್ರಸ್ತರಿಗೆ ಹೆಗಲು ನೀಡಿದ ಒಡನಾಡ ಸಂಸ್ಥೆಯ ಮುಖ್ಯಸ್ಥ ಪರಶುರಾಮ್‌ ಪೊಲೀಸರ ಕೆಲಸವನ್ನು ಶ್ಲಾಘಿಸಿದ್ದಾರೆ. ವ್ಯಾಪಕ ಒತ್ತಡವಿದ್ದರೂ ಪೊಲೀಸರು ಉತ್ತಮ ಕಾರ್ಯ ಮಾಡಿದ್ದಾರೆ. ಅವರ ಕಾರ್ಯ ಶ್ಲಾಘನಾರ್ಹ ಎಂದು ಅವರು ಹೇಳಿದ್ದಾರೆ.

Leave a Comment

Your email address will not be published. Required fields are marked *