ಜಾರಕಿಹೊಳಿಯ ಹಿಂದೂ ವಿರೋಧಿ ಹೇಳಿಕೆಗೆ ಜನ ತಕ್ಕ ಉತ್ತರ ನೀಡ್ತಾರೆ – ಶಶಿಕಲಾ ಜೊಲ್ಲೆ

ಸಮಗ್ರ ನ್ಯೂಸ್: ಹಿಂದೂ ಪದ ಅಶ್ಲೀಲ ಎನ್ನುವರ ಮನಸ್ಥಿತಿಯನ್ನು ಜನರು ಅರಿತುಕೊಳ್ಳಬೇಕಿದೆ. ಸತೀಶ್ ಜಾರಕಿಹೊಳಿ ಹಿಂದೂ ವಿರೋಧಿ ಹೇಳಿಕೆಗೆ ಜನ ತಕ್ಕ ಉತ್ತರ ನೀಡುತ್ತಾರೆ ಎಂದು ಸಚಿವೆ ಶಶಿಕಲಾ ಜೊಲ್ಲೆ ವಾಗ್ದಾಳಿ ನಡೆಸಿದ್ದಾರೆ.

Ad Widget ... ..

ಈ ಬಗ್ಗೆ ನಿಪ್ಪಾಣಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಂಬಿಕೆಯನ್ನು ಕೀಳು ಪದಗಳಿಗೆ ಹೋಲಿಸಿರುವ ಸತೀಶ್‌ ಜಾರಕಿಹೊಳಿ ಮನಸ್ಥಿತಿಯನ್ನು ಜನರು ಅರಿತುಕೊಳ್ಳಬೇಕಾಗಿದೆ.

Ad Widget

ಹಿಂದುತ್ವ ಎನ್ನುವುದು ಬಹುಜನರ ಧಾರ್ಮಿಕ ನಂಬಿಕೆ. ಬಹುಸಂಖ್ಯಾತರ ಭಾವನೆಗೆ ಜಾರಕಿಹೊಳಿ ಧಕ್ಕೆ ತಂದಿದ್ದಾರೆ. ಅವರ ಹಿಂದೂ ವಿರೋಧಿ ಹೇಳಿಕೆಗೆ ಜನರು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತಾರೆ’ ಎಂದು ಕಿಡಿಕಾರಿದ್ದಾರೆ

Leave a Comment

Your email address will not be published. Required fields are marked *