Ad Widget .

ಬಂಧುತ್ವ ಇಲ್ಲದ ಹಿಂದುತ್ವ, ವ್ಯಕ್ತಿಪೂಜೆ ಅಪಾಯಕಾರಿ| ಕೊರೊ‌ನಾ ಸಮಯದಲ್ಲಿ ದೇವರು ಎಲ್ಲೋಗಿದ್ದ? – ಜ್ಞಾನಪ್ರಕಾಶ ಸ್ವಾಮೀಜಿ ಆಕ್ರೋಶ

ಸಮಗ್ರ ನ್ಯೂಸ್: “ಬಂಧುತ್ವ ಇಲ್ಲದ ಹಿಂದುತ್ವ ದೇಶಕ್ಕೆ ಅಪಾಯಕಾರಿ. ದೇಶ ಅತ್ಯಂತ ಅಪಾಯದಲ್ಲಿದೆ. ಇಬ್ಬರು ದೇಶವನ್ನು ಮಾರುತ್ತಿದ್ದಾರೆ, ಇಬ್ಬರು ದೇಶವನ್ನು ಕೊಳ್ಳುತ್ತಿದ್ದಾರೆ,” ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮೀತ್ ಷಾ ವಿರುದ್ಧ ಜ್ಞಾನಪ್ರಕಾಶ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ad Widget . Ad Widget .

ನಿಪ್ಪಾಣಿಯಲ್ಲಿ ಮೈಸೂರು ಉರಿಲಿಂಗ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾನವ ಬಂಧುತ್ವ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮನೆ ಮನೆಗೆ ಬುದ್ದ, ಬಸವ, ಅಂಬೇಡ್ಕರ್ ತಲುಪಬೇಕಿದೆ ಎಂದು ಅಭಿಪ್ರಾಯಪಟ್ಟರು.

Ad Widget . Ad Widget .

“ಈ ದೇಶದಲ್ಲಿ ಆರು ನಿಮಿಷಕ್ಕೆ ಒಂದು ರೇಪ್ ಆಗುತ್ತಿದೆ. ಮಂತ್ರದಿಂದ ದೇಶದಲ್ಲಿ ಏನು ಆಗುವುದಿಲ್ಲ, ನಿಮ್ಮನ್ನು ಮೂರ್ಖರನ್ನಾಗಿಸಲು ಯತ್ನ ನಡೆದಿದೆ. ಮಂತ್ರದಿಂದ ಭಾರತ ಆಗಬಾರದು ಬಂಧುತ್ವದಿಂದ ಭಾರತ ಆಗಬೇಕು. ಹಿಂದುತ್ವ ಹಾಗೂ ದೇವರು ಎಂಬುದು ಸುಳ್ಳು, ಕೋವಿಡ್‌ ಬಂದಾಗ ದೇವರು ಎಲ್ಲಿ ಹೋಗಿದ್ದ,” ಎಂದು ಗಂಭೀರವಾಗಿ ಟೀಕಿಸಿದ್ದಾರೆ.

“ದೇಶದಲ್ಲಿ ಬೆಂಕಿ ಬಿದ್ದಿದೆ, ಜಾತಿ, ಧರ್ಮಗಳ ನಡುವೆ ಬೆಂಕಿ ಬಿದ್ದಿದೆ. ಹೆಣಗಳ ರಾಜಕಾರಣ, ಹಣದ ರಾಜಕಾರಣ ನಡಿಯುತ್ತಿದೆ. ಹೆಣ ಬಿದ್ದರೆ, ಯಾವ ಪಕ್ಷದ ಹೆಣ ಅನ್ನುವ ರೀತಿಯಾಗಿದೆ. ಇನ್ನು ಮುಂದೆ ಹಿಂದುತ್ವ ಜೊತೆ ಅಲ್ಲ ಬಂಧುತ್ವ ಜೊತೆ ಚುನಾವಣೆ ನಡಿಯಬೇಕು. ದೇಶದಲ್ಲಿ ವ್ಯಕ್ತಿ ಪೂಜೆ, ಅಪಾಯಕಾರಿ,” ಎಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಮೈಸೂರು ಉರಿಲಿಂಗ ಮಠ ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

Leave a Comment

Your email address will not be published. Required fields are marked *