ವರ್ಗಾವಣೆಗೊಂಡ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಮತ್ತೆ ಕರೆಸಿಕೊಳ್ಳದಿರಲು ಪಂಚಾಯತ್ ಸದಸ್ಯರ ಬೇಡಿಕೆ

ಸಮಗ್ರ ನ್ಯೂಸ್: ಪುತ್ತೂರು ತಲೂಕಿನ ಆರ್ಯಾಪು ಗ್ರಾಮ ಪಂಚಾಯತ್ ನಲ್ಲಿ ಸೇವೆ ಸಲ್ಲಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ನಾಗೇಶ್ ರವನ್ನು
ಮತ್ತೆ ಆರ್ಯಾಪು ಗ್ರಾಮ ಪಂಚಾಯತ್ ಗೆ ಯಾವುದೇ ಕಾರಣಕ್ಕೂ ವರ್ಗಾವಣೆಗೊಳಿಸಬಾರದೆಂದು ಶಾಸಕರಿಗೆ ಬಿಜೆಪಿಯ ಯುವ ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲ ಸದಸ್ಯರಾದ ಸಚಿನ್ ವಳತ್ತಡ್ಕ ಮನವಿ ಸಲ್ಲಿಸಿದರು.

Ad Widget ... ..

ನಾಗೇಶ್ ರವರು ಈಗಾಗಲೆ ಪುತ್ತೂರು ತಾಲೂಕಿನ ಒಳಮೊಗ್ರು ಗಾಮ ಪಂಚಾಯತ್ ಗೆ ವರ್ಗಾವಣೆಗೊಂಡಿದ್ದು ಅದಕ್ಕಾಗಿ ನಾವು ಅವರಿಗೆ ಮತ್ತು ವರ್ಗಾವಣೆಗೊಳಿಸಿದ ಮಾನ್ಯ ಶಾಸಕರಾದ ಸಂಜೀವ ಮಠಂದೂರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.

Ad Widget

ಈಗಾಗಲೇ ಕೆಲವರು ವರ್ಗಾವಣೆಗೊಂಡ ನಾಗೇಶ್ ರವರನ್ನು ಮತ್ತೆ ಆರ್ಯಾಪು ಗ್ರಾಮ ಪಂಚಾಯತ್ ಗೆ ಮರು ವರ್ಗಾವಣೆಗೊಳಿಸಬೇಕೆಂದು ಪಣ ತೊಟ್ಟಿದ್ದು ಅದಕ್ಕಾಗಿ ಶಾಸಕರಿಗೆ ಮನವಿಯನ್ನು ಕೂಡ ಸಲ್ಲಿಸಿರುವುದು ಗೊತ್ತಾಗಿದೆ. ಆದರೆ ಯಾವುದೇ ಕಾರಣಕ್ಕೂ ಅವರನ್ನು ಆರ್ಯಾಪು ಗ್ರಾಮ ಪಂಚಾಯತ್ ಗೆ ಪುನಃ ವರ್ಗಾವಣೆಗೊಳಿಸಬಾರದೆಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಲಕ್ಷ್ಮೀಶ ಪೀಳಿಪಂಜರ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *