Ad Widget .

ಶಿವಮೊಗ್ಗ: ತಾಯಿ, ಮಗಳು,‌ ಮೊಮ್ಮಗಳು ಅಪಘಾತದಲ್ಲಿ ‌ದುರ್ಮರಣ

ಸಮಗ್ರ ನ್ಯೂಸ್: ಕಾರು- ಬೈಕ್​ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ದುರಂತ ಅಂತ್ಯ ಕಂಡ ಘಟನೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಬಳಿಯ ಮಂಚಿಕೊಪ್ಪದಲ್ಲಿ ನಡೆದಿದೆ.

Ad Widget . Ad Widget .

ಹಲುಗಿನಕೊಪ್ಪದ ಗಂಗಮ್ಮ(50), ಇವರ ಮಗಳು ಜ್ಯೋತಿ(30) ಮತ್ತು ಜ್ಯೋತಿ ಅವರ 4 ವರ್ಷದ ಪುತ್ರಿ ಸೌಜನ್ಯ(4) ಮೃತ ದುರ್ದೈವಿಗಳು.

Ad Widget . Ad Widget .

ಇವರೆಲ್ಲರೂ ಕಾರಿನಲ್ಲಿ ಹಿರೇಕರೂರು ಕಡೆಯಿಂದ ಶಿವಮೊಗ್ಗದತ್ತ ಭಾನುವಾರ ರಾತ್ರಿ ಹೊರಟಿದ್ದರು. ಶಿರಾಳಕೊಪ್ಪದಿಂದ ಹುಲಗಿನಕೊಪ್ಪ ಕಡೆಗೆ ಬೈಕ್​ನಲ್ಲಿ ಮಲ್ಲಿಕಾರ್ಜುನ್ ಎಂಬಾತ ತೆರಳುತ್ತಿದ್ದ.

ಮಾರ್ಗಮಧ್ಯೆ ಶಿರಾಳಕೊಪ್ಪ ಸಮೀಪದ ಮಂಚಿಕೊಪ್ಪ ಬಳಿ ಕಾರು ಮತ್ತು ಬೈಕ್​ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಮಲ್ಲಿಕಾರ್ಜುನ್​ ಸ್ಥಿತಿ ಗಂಭೀರವಾಗಿದೆ. ಕಾರಿನಲ್ಲಿದ್ದ ತಾಯಿ-ಮಗಳು-ಮೊಮ್ಮಗಳು ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಮಗು ಸೌಜನ್ಯ ಸ್ಥಳದಲ್ಲೇ ಮೃತಪಟ್ಟಳು. ಹೆಚ್ಚಿನ‌ ಚಿಕಿತ್ಸೆಗೆಂದು ಶಿವಮೊಗ್ಗಕ್ಕೆ ಕರೆದೊಯ್ಯುವ ವೇಳೆ ಜ್ಯೋತಿ ಕೊನೆಯುಸಿರೆಳೆದರೆ, ಶಿಕಾರಿಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಗಂಗಮ್ಮ ಮೃತಪಟ್ಟರು. ಶಿರಾಳಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *