ಸಮಗ್ರ ನ್ಯೂಸ್: ಹೊನ್ನಾಳಿಯ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಚಂದ್ರಶೇಖರ್ ಅವರದ್ದು ಕೊಲೆಯಲ್ಲ ಎಂದು ತಿಳಿದು ಬಂದಿದೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹಲವು ವಿಷಯಗಳು ಬೆಳಕಿಗೆ ಬಂದಿದೆ. ಸಿಡಿಆರ್ ರಿಪೋರ್ಟ್ ಪ್ರಕಾರ, ಘಟನೆ ನಡೆದ ಸ್ಥಳ ಅಂದ್ರೆ ಕಾರ್ ಮತ್ತು ಚಂದ್ರಶೇಖರ್ ಶವ ಪತ್ತೆಯಾದ ಜಾಗದಲ್ಲಿ ಬೇರೆ ಯಾವುದೇ ಮೊಬೈಲ್ಗಳು ಪತ್ತೆಯಾಗಿಲ್ಲ. ಇನ್ನು ಪ್ರಕರಣ ಸಂಬಂಧ ಚಂದ್ರಶೇಖರ್ ಸ್ನೇಹಿತರು ನೀಡಿದ ಹೇಳಿಕೆಯಲ್ಲಿ ಯಾವುದೇ ಗೊಂದಲಗಳು ಇರಲಿಲ್ಲ. ಈ ಎಲ್ಲಾ ಮಾಹಿತಿಯಿಂದ ಇದೊಂದು ಅಪಘಾತವೇ ಇರಬಹುದು ಎಂದು ಪೊಲೀಸರು ಪರಿಗಣಿಸಿದ್ದಾರೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಚಂದ್ರು ಸ್ನೇಹಿತರ ಸಲಿಂಗಕಾಮಕ್ಕೆ ಬಲಿಯಾದನೇ? ಎಂಬ ಅನುಮಾನ ಮೂಡಿಸಿದೆ. ಚಂದ್ರು ಅಲಿಯಾಸ್ ಚಂದ್ರಶೇಖರ್ ಶವ ಪತ್ತೆಯಾದಾಗ ಆತನ ಒಳಉಡುಪು ಇರಲಿಲ್ಲ. ಆತನ ಕಿವಿ ಕಚ್ಚಲಾಗಿದೆ ಎಂದು ಆರೋಪಿಸಲಾಗಿದೆ. ಚಂದ್ರಶೇಖರ್ ಅವರ ತಂದೆಯ ಈ ಹೇಳಿಕೆ ಒಂದಿಷ್ಟು ಅನುಮಾನಗಳಿಗೆ ಕಾರಣವಾಗಬಹುದು.
ಇನ್ನು ಸೋದರನ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ಶಾಸಕರಾದ ರೇಣುಕಾಚಾರ್ಯ ಹಿಂದೇಟು ಹಾಕಿದ್ದಾರೆ. ಪೊಲೀಸರು ಕಿರಣ್ ಮತ್ತು ಆತನ ಸ್ನೇಹಿತರನ್ನು ಚೆನ್ನಾಗಿ ವಿಚಾರಣೆ ನಡೆಸಿಲ್ಲ. ಇದರ ಜೊತೆಗೆ ಪಂಚನಾಮೆ ವೇಳೆಯೂ ನಮಗೆ ಮಾಹಿತಿ ನೀಡಿಲ್ಲ ಎಂದು ಆರೋಪ ಮಾಡಿದ್ದಾರೆ.
ಅಕ್ಟೋಬರ್ 30ರಂದು ಚಂದ್ರಶೇಖರ್ ತನ್ನ ಆಪ್ತ ಗೆಳೆಯರನ್ನು ಭೇಟಿಯಾಗಲು ಯತ್ನಿಸಿದ್ದ ಎನ್ನಲಾಗಿದೆ. ಮಾಧ್ಯಮಗಳ ಜೊತೆ ಮಾತನಾಡಿದ ಚಂದ್ರಶೇಖರ್ ಗೆಳೆಯ ಚರಣ್, ಅಂದು ರಾತ್ರಿ 11.30ವರೆಗೂ ನನ್ನ ಜೊತೆಯೇ ಚೆನ್ನಾಗಿ ಮಾತಾಡಿದ್ದ. ಅಂದು ಸಹಜವಾಗಿ ಮತ್ತು ಶಾಂತವಾಗಿಯೇ ನನ್ನ ಜೊತೆಯಲ್ಲಿ ಮಾತನಾಡಿದ್ದನು ಎಂದು ಹೇಳಿದ್ದಾರೆ.
ಇನ್ನು ಉತ್ತಮ್ ಎಂಬವರು ಮಾತನಾಡಿ, ಅಕ್ಟೋಬರ್ 30ರಂದು ನಾನು ಸಹ ಗೌರಿಗದ್ದೆಗೆ ಹೋಗಬೇಕಿತ್ತು. ಆದ್ರೆ ಅನಾರೋಗ್ಯದ ಹಿನ್ನೆಲೆ ನಾನು ಅಲ್ಲಿಗೆ ಹೋಗಲಿಲ್ಲ. ಇದೇ ವೇಳೆ ಚಂದ್ರು ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದರು.
ಚಂದ್ರಶೇಖರ್ ನಾಪತ್ತೆಯಾದ ದಿನ ಅಂದ್ರೆ ರಾತ್ರಿ 11.30ರ ವೇಳೆಗೆ ಒಂದೇ ಸಂಖ್ಯೆಯಿಂದ ಪದೇ ಪದೇ ಫೋನ್ ಕರೆ ಬಂದಿದೆ. ಈ ಕಾಲ್ ಲಿಸ್ಟ್ ನ್ನು ಖಾಸಗಿ ವಾಹಿನಿ ನ್ಯೂಸ್18 ಬಿಡುಗಡೆ ಮಾಡಿದ್ದು, ಈ ಮೊಬೈಲ್ ಸಂಖ್ಯೆ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಾಸಕ ರೇಣುಕಾಚಾರ್ಯ ಪೊಲೀಸರ ತನಿಖೆ ಮೇಲೆ ಅನುಮಾನ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಚಂದ್ರು ಅವರದ್ದು ಕೊಲೆಯಲ್ಲ ಅಪಘಾತ ಎಂದು ಹೇಳುತ್ತಿದ್ದಾರೆ. ಹಾಗಾದ್ರೆ ಚಂದ್ರು ಕೈಗಳನ್ನು ಹಗ್ಗದಿಂದ ಕಟ್ಟಿದ್ಯಾರು? ಓರ್ವ ಶಾಸಕನ ಪುತ್ರನಿಗೆ ಹೀಗಾದರೆ, ಜನ ಸಾಮಾನ್ಯರ ಗತಿ ಏನು ಎಂದು ಪ್ರಶ್ನೆ ಮಾಡಿದ್ದಾರೆ.
ಈ ನಡುವೆ ನ್ಯಾಮತಿ-ಹೊನ್ನಾಳಿ ಮಾರ್ಗದಲ್ಲಿರುವ ಕಾಲುವೆಯಲ್ಲಿ ಚಂದ್ರು ಶವ ಮತ್ತು ಕಾರು ಪತ್ತೆಯಾಗಿದೆ. ಆದರೆ ಚಂದ್ರು ಅವರ ಮೊಬೈಲ್ ಕೊನೆಯ ಲೋಕೆಷೇನ್ ಬೇರೆ ಕಡೆ ತೋರಿಸುತ್ತಿರೋದು ಹೇಗೆ? ಎಂದು ಪೊಲೀಸರ ತನಿಖೆಯ ಬಗ್ಗೆ ರೇಣುಕಾಚಾರ್ಯ ಅನುಮಾನ ವ್ಯಕ್ತಪಡಿಸಿದ್ದಾರೆ.