Ad Widget .

ಸುಳ್ಯ: ಭಜರಂಗದಳ ಕಾರ್ಯಕ್ರಮದಲ್ಲಿ ದಲಿತ ಬಾಲಕಿಗೆ ಲೈಂಗಿಕ ಕಿರುಕುಳ|ಎಫ್‌ಐಆರ್ ದಾಖಲು

ಸಮಗ್ರ ನ್ಯೂಸ್: ಕಾರ್ಯಕ್ರಮವೊಂದರಲ್ಲಿ ಯುವಕನೋರ್ವ ದಲಿತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಸುಳ್ಯದ ಅಮರ ಪಡ್ನೂರು ಗ್ರಾಮದಿಂದ ವರದಿಯಾಗಿದೆ.
ಅಮರ ಪಡ್ನೂರು ಗ್ರಾಮದ ಚೊಕ್ಕಾಡಿ ಪದವು ಸತ್ಯ ಸಾಯಿಬಾಬಾ ಮಂದಿರದ ಮುಂಭಾಗದಲ್ಲಿ ಬಜರಂಗದಳದ ಕಾರ್ಯಕರ್ತರು ಸಾಮೂಹಿಕ ಗೋಪೂಜೆ ನಡೆಸಿದ್ದರು. ಇದೇ ಸ್ಥಳದಲ್ಲಿ ಯುವಕನೋರ್ವ ೧೬ ವರ್ಷದ ಬಾಲಕಿಗೆ ಲೈಂಗಿಕ ಕಿರುಕಳ ನೀಡಿದ್ದಾನೆ ಎನ್ನಲಾಗಿದೆ.

Ad Widget . Ad Widget .

ಪ್ರಕರಣದ ಆರೋಪಿಯನ್ನು ಮೇರ್ಕಜೆಯ ಯತಿ ಎಂದು ಗುರುತಿಸಲಾಗಿದೆ. ಈ ಘಟನೆಯ ಬಗ್ಗೆ ಬಾಲಕಿ ಅಂಬೇಡ್ಕರ್ ರಕ್ಷಣಾ ವೇದಿಕೆಗೆ ಮಾಹಿತಿ ನೀಡಿದ್ದಾಳೆ. ತಕ್ಷಣ ರಾಜ್ಯ ಅಧ್ಯಕ್ಷರಾದ ಪಿ.ಸುಂದರ ಪಾಟಾಜೆಯವರು ಬೆಳ್ಳಾರೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಯತಿ ಗೌಡ ಎಂಬವರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

Ad Widget . Ad Widget .

Leave a Comment

Your email address will not be published. Required fields are marked *