Ad Widget .

ಚಂದ್ರಶೇಖರ್ ನಾಲೆಗೆ ಬಿದ್ದೇ ಸತ್ತರಾ? ಡಯಾಟಮ್ ವರದಿಯಲ್ಲೇನಿದೆ…?

ಸಮಗ್ರ ನ್ಯೂಸ್: ಹೊನ್ನಾಳಿಯ ಬಿಜೆಪಿ ಶಾಸಕ ಸೋದರನ ಪುತ್ರನ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಯಾಟಮ್‌ ವರದಿ ಪೊಲೀಸರ ಕೈ ಸೇರಿದೆ. ಶ್ವಾಸಕೋಶದಲ್ಲಿ ನೀರು ಇರುವುದನ್ನು ಈ ವರದಿ ಖಚಿತಪಡಿಸಿದೆ. ಈ ಹಿನ್ನೆಲೆ ಚಂದ್ರಶೇಖರ್‌ ಬದುಕಿದ್ದಾಗಲೇ ನಾಲೆಗೆ ಬಿದ್ದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Ad Widget . Ad Widget .

ಒಟ್ಟಾರೆ ಡಯಾಟಮ್‌ ಪರೀಕ್ಷಾ ವರದಿ ಸಹಜ ಸಾವು ಎಂದು ಹೇಳುತ್ತಿದೆ. ಎಫ್‌ಎಸ್‌ಎಲ್‌, ಮರಣೋತ್ತರ ಪರೀಕ್ಷಾ ವರದಿಗೆ ಪೊಲೀಸರು ಕಾಯುತ್ತಿದ್ದಾರೆ. ಇನ್ನು, ಚಂದ್ರು ಸಾವಿನ ಬಗ್ಗೆ ಎಡಿಜಿಪಿ ಅಲೋಕ್‌ ಕುಮಾರ್‌ ಮಾಹಿತಿ ಪಡೆದಿದ್ದಾರೆ ಎಂದೂ ತಿಳಿದುಬಂದಿದೆ. ರಾಜ್ಯ ಬಿಜೆಪಿ ಸರ್ಕಾರ ಈ ಪ್ರಕರಣಕ್ಕೆ ತುಂಬಾ ಮಹತ್ವ ಕೊಟ್ಟಿದೆ ಎಂದು ರಾಜ್ಯ ಗೃಹ ಸಚಿವ ಹೇಳಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *